ಅಂಡಮಾನ್‌ನಲ್ಲಿ ಮಲೇಷ್ಯಾ ವಿಮಾನದ ಪುರಾವೆ ಪತ್ತೆ
ಒಂದು ವಾರದಿಂದ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಪುರಾವೆಗಳನ್ನು ಶುಕ್ರವಾರ..
ಕೌಲಾಲಂಪುರ: ಒಂದು ವಾರದಿಂದ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಪುರಾವೆಗಳನ್ನು ಶುಕ್ರವಾರ ಮಲೇಷ್ಯಾ ಸೇನಾ ರಡಾರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಪತ್ತೆ ಹಚ್ಚಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಗುರುತು ಸಿಗದ ವಿಮಾನವೊಂದನ್ನು ಸೇನಾ ರಡಾರ್ ಪತ್ತೆ ಹಚ್ಚಿದ್ದು, ಇದು ನಾಪತ್ತೆಯಾದ ಎಂ.ಎಚ್.370 ವಿಮಾನವಾಗಿರಬಹುದೆಂದು ತನಿಖಾ ಅಧಿಕಾರಿಗಳು ನಂಬಿದ್ದಾರೆ.
ವಿಮಾನ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹಾರುತ್ತಿದ್ದ ವೇಳೆ ಅಂಡಮಾನ್ ಮತ್ತು ಬೇ ಆಫ್ ಬೆಂಗಾಲ್ ಸಮುದ್ರ ಮಧ್ಯೆ ನಿಯಂತ್ರಣ ಕಳೆದುಕೊಂಡಿರುವುದನ್ನು ಸೇನಾ ರಡಾರ್ ಪತ್ತೆ ಹಚ್ಚಿದೆ.
ನಿನ್ನೆಯಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲೂ ಶೋಧ ಕಾರ್ಯ ನಡೆಸಿರುವ ಮಲೇಷ್ಯಾ ಅಧಿಕಾರಿಗಳು, ಈ ಶೋಧ ಕಾರ್ಯಕ್ಕಾಗಿ ಮಲೇಷ್ಯಾ ಸರ್ಕಾರ ಭಾರತದ ನೆರವು ಕೋರಿತ್ತು.
ಉಯ್ಗುರ್ ಉಗ್ರರ ಕೈವಾಡ ಶಂಕೆ
ಈ ಮಧ್ಯೆ ಮಲೇಷ್ಯಾ ವಿಮಾನದ ನಾಪತ್ತೆಯ ಹಿಂದೆ ಚೀನಾದ ಉಯ್ಗುರ್ ಉಗ್ರರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಉಗ್ರರ ಕೈವಾಡವಿರುವುದು ನಿಜವೇ ಆಗಿದ್ದರೆ ಇದು ಚೀನಾಗೆ ಭಾರಿ ಹಿನ್ನೆಡೆಯಾಗಲಿದೆ. ನಿಗೂಢವಾಗಿ ನಾಪತ್ತೆಯಾಗಿರುವ ವಿಮಾನದಲ್ಲಿ ಶೇ.66ರಷ್ಟು ಪ್ರಯಾಣಿಕರು ಚೀನಾದವರಾಗಿದ್ದಾರೆ.