ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸಿದ ಗುಜರಾತ್ ಪೊಲೀಸರು
ಗುಜರಾತ್: ಸುಂಕ ಪಾವತಿಸದ ಹಿನ್ನಲೆಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ ವಾರ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೇಜ್ರಿವಾಲ್ ಮತ್ತು ಅವರು ಬೆಂಬಲಿಗರದು 20 ಕಾರುಗಳು ಟೋಲ್ ಪಾವತಿಸದೇ ತೆರಳಿದ್ದಾರೆ ಎಂದು ಟೋಲ್ ಬೂತ್ ಕಾರ್ಮಿಕ ಮುಖೇಶ್ ಗಧವಿ ದೂರು ದಾಖಲಿಸಿದ್ದಾರೆ.
ಮಾಚ್ 5 ರಂದು ರಾಧನಪುರ್ನಿಂದ ಕುಚ್ಗೆ ಹೋಗುತ್ತಿದ್ದಾಗ ವರಾಹಿ ಟೋಲ್ ಪ್ಲಾಜಾದಲ್ಲಿ ಸುಂಕ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.