ಬಿಜೆಪಿಯತ್ತ ಮುಖಮಾಡಿದ 'ಸುಂಟರಗಾಳಿ' ರಕ್ಷಿತಾ
ಬಿಎಸ್‌ಆರ್ ಕಾಂಗ್ರೆಸ್‌ನಿಂದ ಜೆಡಿಎಸ್ ಕಡೆ ಬೀಸಿದ್ದ 'ಸುಂಟರಗಾಳಿ' ಇದೀಗ ಬಿಜೆಪಿ ಕಡೆ ಮುಖ ಮಾಡಿದ್ದು,.
ಬೆಂಗಳೂರು: ಬಿಎಸ್‌ಆರ್ ಕಾಂಗ್ರೆಸ್‌ನಿಂದ ಜೆಡಿಎಸ್ ಕಡೆ ಬೀಸಿದ್ದ 'ಸುಂಟರಗಾಳಿ' ಇದೀಗ ಬಿಜೆಪಿ ಕಡೆ ಮುಖ ಮಾಡಿದ್ದು, ಇನ್ನು ಒಂದೇರಡು ದಿನದಲ್ಲಿ ಸುಂಟರಗಾಳಿ ಖ್ಯಾತಿಯ ನಟಿ ರಕ್ಷಿತಾ ಅವರು, ತಮ್ಮ ಪತಿ, ನಿರ್ದೇಶಕ ಪ್ರೇಮ್ ಅವರೊಂದಿಗೆ ಬಿಜೆಪಿ ಸೇರುವುದು ಖಚಿತವಾಗಿದೆ.
ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ನಟಿ ರಕ್ಷಿತಾ ಪ್ರೇಮ್, ಜೆಡಿಎಸ್‌ನಿಂದ ಟಿಕೆಟ್ ಸಿಗುವುದು ಅಸಾಧ್ಯ ಎಂಬುದನ್ನು ಅರಿತು ಈಗ ಜೆಡಿಎಸ್‌ಗೆ ಗುಡ್‌ಬೈ ಹೇಳಲು ನಿರ್ಧಸಿದ್ದಾರೆ.
ರಕ್ಷಿತಾ ಪ್ರೇಮ್ ದಂಪತಿ ಇಂದು ಮಧ್ಯಾಹ್ನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ತೆರಳಿ, ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿದ್ದು, ಇನ್ನು ಒಂದೇರಡು ದಿನದಲ್ಲಿ ಅಧಿಕೃತವಾಗಿ ಬಿಜೆಪಿ ಸೇರುವ ಸಾಧ್ಯತೆ ಇದೆ.
ಮಂಡ್ಯದ ಸೊಸೆ ಎಂದು ಹೇಳಿಕೊಳ್ಳುತ್ತಿರುವ ನಟಿ ರಕ್ಷಿತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ಮಂಡ್ಯದ ಸೊಸೆಗೆ ಟಿಕೆಟ್ ನೀಡಲು ಸ್ಪಷ್ಟವಾಗಿ ನಿರಾಕರಿಸಿತ್ತು.