ಮಲೇಷ್ಯಾ ವಿಮಾನ ಪತ್ತೆಗಾಗಿ ಹಿಂದೂ ಮಹಾಸಾಗರದತ್ತ
ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಎಂ.ಎಚ್ 370 ವಿಮಾನ ಶೋಧನೆಯನ್ನು ಹಿಂದೂ ಮಹಾಸಾಗರದಲ್ಲಿ ನಡೆಸಲಾಗುತ್ತಿದೆ...
ಕೌಲಾಲಂಪುರ: ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಎಂ.ಎಚ್ 370 ವಿಮಾನ ಶೋಧನೆಯನ್ನು ಹಿಂದೂ ಮಹಾಸಾಗರದಲ್ಲಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಲೇಷ್ಯಾ ಸೇನಾ ರಡಾರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಪತ್ತೆ ಹಚ್ಚಿದೆ ಎನ್ನಲಾಗಿತ್ತು. ವಿಮಾನ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹಾರುತ್ತಿದ್ದ ವೇಳೆ ಅಂಡಮಾನ್ ಮತ್ತು ಬೆ ಆಫ್ ಬೆಂಗಾಲ್ ಸಮುದ್ರ ಮಧ್ಯೆ ನಿಯಂತ್ರಣ ಕಳೆದುಕೊಂಡಿರುವುದನ್ನು ಸೇನಾ ರಡಾರ್ ಪತ್ತೆ ಹಚ್ಚಿತ್ತು.
ಈ ಹಿನ್ನಲೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಶೋಧನ ಕಾರ್ಯಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಲೇಷ್ಯಾ ವಿಮಾನ ನಾಪತ್ತೆಯಾದಾಗಿನಿಂದ ಅನೇಕ ಅನುಮಾನಗಳನ್ನು ಹುಟ್ಟಿಹಾಕಿದೆ. ಇದೀಗ ಬಂದ ವರದಿಯ ಪ್ರಕಾರ ವಿಮಾನದ ಪೈಲೆಟ್ ಅಥವಾ ವಿಮಾನದಲ್ಲಿದ್ದ ಬೇರೆ ಯಾರೋ ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಿದ್ದಾರೆ ಅಥವಾ ಸೂಸೈಡ್ ಮಾಡಿಕೊಳ್ಳವ ಪ್ರಯತ್ನ ಅಥವಾ ಪ್ರಯಾಣಿಕರನ್ನು ಅಪಹರಿಸಲು ಯತ್ನಿಸಿರುವ ಸಾಧ್ಯತೆಗಳು ಕಂಡು ಬಂದಿವೆ.
ಬಹುಶಃ ಪೈಲೆಟ್ ಆತ್ಮಹತ್ಯೆಗೆ ಯತ್ನಿಸಿರುತ್ತಾನೆ, ಇಲ್ಲವಾದರೆ ಹೈಜಾಕ್ ಮಾಡುವವನಾಗಿರುತ್ತಾನೆ. ಹಾಗಾಗಿ ವಿಮಾನದ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ವಿಮಾನದ ಬಗ್ಗೆ ಹೆಚ್ಚು ತಿಳಿದುಕೊಂಡಿರುವವರು ಹೀಗೆ ಮಾಡಲು ಸಾಧ್ಯ ಎಂದು ಆಸ್ಟ್ರೇಲಿಯಾ ಮತ್ತು ಅಂತಾರಾಷ್ಟ್ರೀಯ ಪೈಲೆಟ್ ಸಂಘಟನೆಯ ಸದಸ್ಯ ಮೈಕ್ ಗ್ಲಿನ್ ಹೇಳಿದ್ದಾರೆ.
ಉಯ್ಗುರ್ ಉಗ್ರರ ಕೈವಾಡ ಶಂಕೆ
ಈ ಮಧ್ಯೆ ಮಲೇಷ್ಯಾ ವಿಮಾನದ ನಾಪತ್ತೆಯ ಹಿಂದೆ ಚೀನಾದ ಉಯ್ಗುರ್ ಉಗ್ರರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಉಗ್ರರ ಕೈವಾಡವಿರುವುದು ನಿಜವೇ ಆಗಿದ್ದರೆ ಇದು ಚೀನಾಗೆ ಭಾರಿ ಹಿನ್ನೆಡೆಯಾಗಲಿದೆ. ನಿಗೂಢವಾಗಿ ನಾಪತ್ತೆಯಾಗಿರುವ ವಿಮಾನದಲ್ಲಿ ಶೇ.66ರಷ್ಟು ಪ್ರಯಾಣಿಕರು ಚೀನಾದವರಾಗಿದ್ದಾರೆ.