ಯಾರ ಜೀತಾದಾಳಲ್ಲ; ಬಿಜೆಪಿ ಬೆಂಬಲದ ಬಗ್ಗೆ ಮರು ಚಿಂತನೆ: ರಾಮದೇವ್
ನಾನು ಯಾರ ಜೀತಾದಾಳಲ್ಲ ಎಂದಿರುವ ರಾಮದೇವ್, ಎನ್ಡಿಎ ಮತ್ತು ಬಿಜೆಪಿ ಬೆಂಬಲದ ಬಗ್ಗೆ ಮರು ವಿಚಾರಣೆ ಮಾಡಲಾಗುವುದು...
ನವದೆಹಲಿ: ನಾನು ಯಾರ ಜೀತಾದಾಳಲ್ಲ ಎಂದು ಯೋಗಾ ಗುರು ಬಾಬಾ ರಾಮದೇವ್ ಶುಕ್ರವಾರ ಹೇಳಿದ್ದಾರೆ.
ನಾನು ಯಾರ ಜೀತಾದಾಳಲ್ಲ ಎಂದಿರುವ ರಾಮದೇವ್, ಎನ್ಡಿಎ ಮತ್ತು ಬಿಜೆಪಿ ಬೆಂಬಲದ ಬಗ್ಗೆ ಮರು ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಾವು ಯಾರ ಸೇವಕರಲ್ಲ. ರಾಜಕೀಯದಲ್ಲಿ ಆಯ್ಕೆ ಕಡಿಮೆ ಇರುವುದರಿಂದ ಬೆಂಬಲದ ಬಗ್ಗೆ ಚಿಂತಿಸಬೇಕಿದೆ. ನಮ್ಮ ಬೆಂಬಲ ಕೇವಲ ಸಮಾಜದ ಸಮಸ್ಯೆಗಳ ಬಗೆಹರಿಸುವವರಿಗೆ ಮಾತ್ರ. ಈಗಾಗಲೇ ಎನ್ಡಿಎ ಪಕ್ಷದಲ್ಲಿ ಗೊಂದಲಗಳಿದ್ದು, ಬೆಂಬಲ ಸೂಚಿಸುವುದರ ಬಗ್ಗೆ ಮರು ವಿಚಾರಮಾಡಬೇಕಿದೆ ಎಂದು ಹೇಳಿದ್ದಾರೆ.
ಕಪ್ಪು ಹಣ ವಾಪಸಾತಿಗೆ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕೆ ಬಿಜೆಪಿ ಸಹಾಯ ಮಾಡಿದರೆ ಮಾತ್ರ ಎನ್ಡಿಎಗೆ ಬೆಂಬಲ ನೀಡಲಾಗುವುದು ಎಂದು ರಾಮದೇವ್ ತಿಳಿಸಿದ್ದಾರೆ.