ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಜನಿಕಾಂತ್ ಭೇಟಿ ಮಾಡಿದ ಅಳಗಿರಿ

ಮಾಜಿ ಸಚಿವ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರ ಎಂ.ಕೆ ಅಳಗಿರಿ ಶುಕ್ರವಾರ ಸೂಪರ್‌ಸ್ಟಾರ್ ರಜನಿಕಾಂತ್...

Mainashree
Updated On : 14 Mar 2014, 5:28 am

ಚೆನ್ನೈ: ಮಾಜಿ ಸಚಿವ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರ ಎಂ.ಕೆ ಅಳಗಿರಿ ಶುಕ್ರವಾರ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.

ಕರುಣಾನಿಧಿ ಅವರು ಮುಧುರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡದೆ ಡಿಎಂಕೆ ಪಕ್ಷದಿಂದ ಅಳಗಿರಿ ಅವರನ್ನು ವಜಾಗೊಳಿಸಿದ್ದರು.

ನಿನ್ನೆಯಷ್ಟೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಅಳಗಿರಿ ಇಂದು ರಜನಿಕಾಂತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ರಜನಿಕಾಂತ್ ನನ್ನ ಸ್ನೇಹಿತನಾಗಿದ್ದು, ಶಾಂತಿಗಾಗಿ ಅವರನ್ನು ಭೇಟಿಮಾಡಲಾಗಿತ್ತು. ವೈಯಕ್ತಿಕ ವಿಚಾರಗಳ ಬಗ್ಗೆ ರಜನಿಕಾಂತ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಅಳಗಿರಿ ಹೇಳಿದ್ದಾರೆ.

ನಿನ್ನೆ ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಅಳಗಿರಿ, ಹೊಸ ಪಕ್ಷ ಸ್ಥಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಭೇಟಿ ಸೌಹಾರ್ದದ್ದದ್ದು ಎಂದು ಹೇಳಿಕೊಂಡ ಅವರು ಇನ್ನೆರಡು ತಿಂಗಳಲ್ಲಿ ನಿರ್ಧಾರ ಸ್ಪಷ್ಟಪಡಿಸುವುದಾಗಿ ತಿಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement