ಸುಪ್ರೀಂ ಬಗ್ಗೆ ಲಘು ಮಾತು: ಖುರ್ಷಿದ್ ವಿರುದ್ಧ ಮೋದಿ ಕಿಡಿ
ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ಕರ್ತವ್ಯದ ಬಗ್ಗೆ ಲೇವಡಿ...
ನವದೆಹಲಿ: ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ಕರ್ತವ್ಯದ ಬಗ್ಗೆ ಲೇವಡಿ ಮಾಡಿರುವುದನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶುಕ್ರವಾರ ಖಂಡಿಸಿದ್ದಾರೆ.
ನಮ್ಮ ದೇಶದ ಪ್ರಜಾಪ್ರಭುತ್ವ ಬಗ್ಗೆ ಹಾಗೂ ಚುನಾವಣಾ ಆಯೋಗದ ಹೆಮ್ಮೆ ಪಡಬೇಕು. ಚುನಾವಣಾ ಆಯೋಗ ಸಮರ್ಥ ಕರ್ತವ್ಯ ಮಾಡುತ್ತಿದ್ದು, ಶ್ಲಾಘಿಸಬೇಕಿದೆ. ಆದರೆ ಇಂತಹ ಆಯೋಗವನ್ನು ಖುರ್ಷಿದ್ ಟೀಕಿಸಿರುವುದು ಖಂಡನೀಯ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವಿದೇಶದಲ್ಲಿ ನಮ್ಮ ದೇಶದ ಮಂತ್ರಿಗಳು ಭಾರತದ ಆಯೋಗಗಳ ಬಗ್ಗೆ ಹಾಗೂ ಸುಪ್ರೀಂ ಕೋರ್ಟ್ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದು, ಭಾರತ ತಲೆತಗ್ಗಿಸುವಂತೆ ಮಾಡುತ್ತಿದ್ದಾರೆ ಎಂದು ಅವರು ವಿಷಾಧಿಸಿದ್ದಾರೆ.
ಲಂಡನ್ ಪ್ರವಾಸದಲ್ಲಿರುವ ಖುರ್ಷಿದ್ ನಿನ್ನೆ ಕಾರ್ಯಕ್ರಮವೊಂದರಲ್ಲಿ 'ಕೇವಲ 3 ಅಧಿಕಾರಿಗಳು ಚುನಾವಣೆ ವೇಳೆ ಯಾವ ರೀತಿ ಮಾನನಾನಬೇಕು ನಿರ್ಧರಿಸುತ್ತಾರೆ. ಗೆಲ್ಲಲು ಬೇಕಾದಂಥದ್ದನ್ನು ಮಾಡುವಂತಿಲ್ಲ, ಮಾತನಾಡುವಂತಿಲ್ಲ. ತದ ನಂತರ ಸುಪ್ರೀಂಕೋರ್ಟ್ ಬಗ್ಗೆ ಮಾತನಾಡಿದ ಖುರ್ಷಿದ್ ಭಾರತದಲ್ಲಿ ನ್ಯಾಯಾಧೀಶರು ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ಬೆದರಿಕೆ ಹಾಕುತ್ತಾರೆ ಎಂದು ಟೀಕಿಸಿದ್ದರು.