ದೇವಾಯಾನಿ ವಿರುದ್ಧ ಮತ್ತೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಅಮೆರಿಕ
ವಿಸಾ ವಂಚನೆ ಆರೋಪದ...
ವಾಷಿಂಗ್‌ಟನ್: ವಿಸಾ ವಂಚನೆ ಆರೋಪದ ಮೇಲೆ ಮತ್ತೆ ದೇವಾಯಾನಿ ವಿರುದ್ಧ ಅಮೆರಿಕದ ನ್ಯಾಯಾಮಂಡಳಿ ಬಂಧನ ವಾರೆಂಟ್ ಜಾರಿಮಾಡಿದೆ.
ಅಮೆರಿಕದ ನ್ಯಾಯಾಮಂಡಳಿ ದೇವಯಾನಿ ಅವರನ್ನು ಬಂಧಿಸುವಂತೆ ವಾರೆಂಟ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ವೀಸಾ ವಂಚನೆ ಪ್ರಕರಣ ಎದುರಿಸುತ್ತಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಾಯಾನಿ ಖೋಬ್ರಾಗಡೆಗೆ ಕೆಲವು ಗಂಟೆಗಳ ಕಾಲ ನಿರಾಳ ನೀಡಿದ ಅಮೆರಿಕ ಮತ್ತೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಮೊನ್ನೆಯಷ್ಟೇ ವೀಸಾ ವಂಚನೆ ಆರೋಪವನ್ನು ನ್ಯೂಯಾರ್ಕ್‌ನ ಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಅಮೆರಿಕದ ನ್ಯಾಯಾಮಂಡಳಿ ಮತ್ತೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದು, ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಅಮೆರಿಕ ನ್ಯಾಯಾಮಂಡಳಿಯ ಈ ತೀರ್ಪಿಗೆ ಭಾರತ ವಿಷಾಧ ವ್ಯಕ್ತಪಡಿಸಿದ್ದು, ನ್ಯಾಯಾಮಂಡಳಿ ಅರೆಸ್ಟ್ ವಾರೆಂಟ್ ಜಾರಿ ಮಾಡಿರುವುದು ವಿಷಾಧನೀಯ. ಈ ತೀರ್ಮಾನದಿಂದಾಗಿ ಭಾರತ ಮತ್ತು ಅಮೆರಿಕದ ಸಂಬಂಧಕ್ಕೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚು ಕಂಡುಬಂದಿದೆ ಎಂದು ಭಾರತ ಸರ್ಕಾರ ಹೇಳಿದೆ.