ಮೀರಾ ಕುಮಾರ್ ವಿರುದ್ಧ ಬಿಹಾರ ಸ್ಪೀಕರ್ ನ್ನು ಕಣಕ್ಕಿಳಿಸಿದ ಜೆಡಿಯು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತಾದಳ (ಸಂಯುಕ್ತ) ಪಕ್ಷ ಬಿಹಾರ ವಿಧಾನಸಭಾ ಸ್ಪೀಕರ್ ಉದಯ್ ನರೇನ್ ಚೌಧರಿ....
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತಾದಳ (ಸಂಯುಕ್ತ) ಪಕ್ಷ ಬಿಹಾರ ವಿಧಾನಸಭಾ ಸ್ಪೀಕರ್ ಉದಯ್ ನರೇನ್ ಚೌಧರಿ ಅವರನ್ನು ಸಸಾರಾಂ ಕ್ಷೇತ್ರದಲ್ಲಿ ಮತ್ತು ಕೆ.ಪಿ ರಾಮಯ್ಯ ಅವರನ್ನು ಜಮೂಯಿ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ.
ಉದಯ್ ನರೇನ್ ಚೌಧರಿ ವಿರುದ್ಧ ಸಸಾರಾಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಕಣದಲ್ಲಿದ್ದಾರೆ.
ಅದಾಗ್ಯೂ, ಬಿಹಾರದಲ್ಲಿ ಆಡಳಿತರೂಢ ಜೆಡಿಯು ತಮ್ಮ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಬೈಗ್ ಕುಮಾರ್ (ಔರಂಗಾಬಾದ್), ಮಹಾಬಲಿ ಸಿಂಗ್ (ಕರಾಕತ್), ಜೀತನ್ರಾಮ್ ಮಂಜ್ಹಿ (ಗಯಾ) ಮತ್ತು ಕೌಶಲ್ ಯಾದವ್ ನವಾಡಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ .
ಮಹಾಬಲಿ ಸಿಂಗ್ ಅವರನ್ನು ಹೊರತು ಪಡಿಸಿದರೆ ಇನ್ನುಳಿದ 5 ಸೀಟುಗಳಲ್ಲಿ ಹೊಸ ಅಭ್ಯರ್ಥಿಗಳನ್ನೇ ಜೆಡಿಯು ಕಣಕ್ಕಿಳಿಸಿದೆ.
ಸಸಾರಾಂ, ಕರಾಕಟ್, ಔರಂಗಾಬಾದ್, ಗಯಾ, ನವಾಡಾ ಮತ್ತು ಜಮೂಯಿ ಕ್ಷೇತ್ರಗಳಲ್ಲಿ ಏಪ್ರಿಲ್ 10ಕ್ಕೆ ಮತದಾನ ನಡೆಯಲಿದೆ.