ಲಾಲು ಪುತ್ರಿ ಮೀಸಾ ಭಾರತಿಗೆ ಮಧ್ಯಂತರ ಜಾಮೀನು
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರತಿ...
ಬಿಹಾರ: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರತಿ ಅವರಿಗೆ ಶನಿವಾರ ಮಧ್ಯಂತರ ಜಾಮೀನು ದೊರಕಿದೆ.
ನ್ಯಾಯಾಮೂರ್ತಿ ದನಪುರ್, ನ್ಯಾ.ವಿಜಯ್ ಕೃಷ್ಣ ಸಿಂಗ್ ಅವರನ್ನೊಳಗೊಂಡ ನ್ಯಾಯಾಪೀಠ ಮೀಸಾ ಭಾರತಿ ಅವರಿಗೆ ಮಧ್ಯಂತರ ಜಾಮೀನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮೀಸಾ ಭಾರತಿ ಅವರು ಮಾರ್ಚ್ 10ರಂದು ಅನುಮತಿ ಪಡೆಯದೇ ರೋಡ್ ಶೋ ಮೂಲಕ ಪಕ್ಷದ ಪ್ರಚಾರ ಮಾಡಿದ್ದಾರೆ ಎಂದು ಧನಪುರ್ ಪೊಲೀಸ್ ಅಧಿಕಾರಿ ಪ್ರಕರಣ ದಾಖಲಿಸಿದ್ದರು.
ಲಾಲು ಆಪ್ತರಾಗಿದ್ದ ಕೃಪಾಲ್ ಅವರಿಗೆ ಪಾಟಲಿಪುತ್ರದಿಂದ ಲೋಕಸಭೆಗೆ ಟಿಕೆಟ್ ನಿರಾಕರಿಸಿ, ಲಾಲು ಪುತ್ರಿ ಮೀಸಾ ಭಾರತಿಗೆ ಟಿಕೆಟ್ ನೀಡಲಾಗಿತ್ತು.