ಹಾಟ್ ಬ್ಯೂಟಿ ನಮಿತಾ ರಾಜಕೀಯಕ್ಕೆ...?
ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕತ್ ಹಾಟ್ ಎಂದೆನಿಸಿಕೊಂಡ ಮಾದಕ ಚೆಲುವೆ ನಟಿ ನಮಿತಾ ರಾಜಕೀಯ ಪ್ರವೇಶಿಸುತ್ತಾರೇಯೇ?
ಹೀಗಂತ ಊಹಪೋಹಗಳು ಸದ್ಯಕ್ಕೆ ಹರಿದಾಡುತ್ತಿದೆ. ತಮಿಳು, ತೆಲುಗು, ಕನ್ನಡ ಮತ್ತು ಮಳಯಾಳಂನಲ್ಲಿ ಅಭಿನಯಿಸಿ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ನಮಿತಾ ರಾಜಕೀಯ ಪ್ರವೇಶಿಸಿಲು ಇಚ್ಛಿಸಿದ್ದಾರೆ ಎಂದು ತಿಳಿದು ಬಂದಿದೆ.
ನನಗೆ ಮೂರು ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೆ ಯಾವ ಪಕ್ಷಕ್ಕೆ ಸೇರಬೇಕು ಎಂಬುದನ್ನು ನಾನು ನಿರ್ಧರಿಸಬೇಕಿದೆ ಎಂದು ನಮೀತ ಹೇಳಿಕೊಂಡಿದ್ದಾರೆ.
ಪ್ರಸ್ತುತ ನಾನು ಹೆಚ್ಚು ಸಿನಿಮಾದಲ್ಲಿ ನಟಿಸುತ್ತಿಲ್ಲ. ಏಕೆಂದರೆ ನನ್ನ ರಾಜಕೀಯ ಜೀವನದತ್ತ ಹೆಚ್ಚು ತೊಡಗಿಸಿಕೊಳ್ಳಬೇಕೆಂದಿದ್ದೇನೆ. ಹಾಗಾಗಿ ಕಥೆ ಇಷ್ಟಾವಾಗುವಂತಹ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎಂದು ನಮೀತಾ ಹೇಳಿದ್ದಾರೆ.
ನಮೀತಾ ಈ ಹೇಳಿಕೆಯಿಂದ ರಾಜಕೀಯ ಪ್ರವೇಶಿಸಲು ಇಚ್ಛಿಸಿದ್ದಾರೆ ಎಂದು ತಿಳಿಯುತ್ತದೆ ಆದರೆ, ಯಾವ ಪಕ್ಷ ಎಂಬುದು ಅವರೇ ಹೇಳಬೇಕಿದೆ.