ಡಾ.ನೀರಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ
ಲಂಡನ್ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿ...
ಬೆಂಗಳೂರು: ಲಂಡನ್ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಡಾ. ನೀರಜ್ ಇದು ಮೋದಿ ಅಲೆಯಲ್ಲ ಮೋದಿ ಸುನಾಮಿ ಎಂದು ಹೇಳಿದ್ದಾರೆ. ಸದಸ್ಯತ್ವ ಸ್ವೀಕಾರದ ವೇಳೆ ಮಾಜಿ ಸಚಿವ ಸೋಮಣ್ಣ, ಸಂಸದ ಅನಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬಡತನ, ನಿರುದ್ಯೋಗ ಹಾಗು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಧ್ವನಿಯೆತ್ತಿರುವುದರಿಂದ ತಾನು ಬಿಜೆಪಿಗೆ ಸೇರಿದ್ದೇನೆ ಎಂದು ಪಕ್ಷದ ಸದಸ್ಯತ್ವ ಸ್ವೀಕರಿಸಿದ ನಂತರ ಮಾತನಾಡಿದ ನೀರಜ್ ಹೇಳಿದ್ದಾರೆ.
ಗುಲ್ಬರ್ಗಾ ಜಿಲ್ಲೆಯ ಕಮಲಾಪುರದಲ್ಲಿ ಹುಟ್ಟಿ ಬೆಳೆದಿದ್ದ ನೀರಜ್ ಪಾಟೀಲ್, 1992ರಲ್ಲಿ ಗುಲ್ಬರ್ಗದ ಎಚ್. ಎಂ. ಆರ್ ವೈದ್ಯಕೀಯ ಮಹಾ ವಿಶ್ವ ವಿದ್ಯಾಲಯದಲ್ಲಿ ಎಂ.ಬಿ.ಬಿಎಸ್ ಪೂರ್ಣಗೊಳಿಸಿದ್ದರು. ಬಳಿಕ ಉಸ್ಮಾನಿಯ ವಿವಿಯಲ್ಲಿ ಸೇವೆ ಸಲ್ಲಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್ಗೆ ತೆರಳಿದ್ದರು.