ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನನಗೆ ಸೂಕ್ತವೆನಿಸಿದ ಹುಡುಗಿ ಸಿಕ್ಕಿದರೆ ಮದುವೆಯಾಗುವೆ: ರಾಹುಲ್

ನನಗೆ ಸೂಕ್ತವಾದ ಹುಡುಗಿ ಸಿಕ್ಕಿದರೆ ನಾನು ಮದುವೆಯಾಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಿಮ್ಮ ಮದುವೆ ಯಾವಾಗ?...

Rashmi Kasaragodu
Updated On : 17 Mar 2014, 1:47 am

ನವದೆಹಲಿ: ನನಗೆ ಸೂಕ್ತವಾದ ಹುಡುಗಿ ಸಿಕ್ಕಿದರೆ ನಾನು ಮದುವೆಯಾಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಿಮ್ಮ ಮದುವೆ ಯಾವಾಗ? ಎಂದು ಕೇಳಿದ್ದಕ್ಕೆ ರಾಹುಲ್ ಈ ರೀತಿ ಉತ್ತರಿಸಿದ್ದಾರೆ.

ಈ ಪ್ರಶ್ನೆಯನ್ನೇ ನನ್ನಲ್ಲಿ ಪದೇ ಪದೇ ಕೇಳಲಾಗುತ್ತಿದೆ. ನಾನೀಗ ಚುನಾವಣಾ ಅಖಾಡದಲ್ಲಿ ಬ್ಯುಸಿಯಾಗಿದ್ದೇನೆ. ದುರದೃಷ್ಟವಾತ್, ನಾನೀಗ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಗಮನ ಹರಿಸಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ಮದುವೆಯ ಬಗ್ಗೆ 2 ವರ್ಷಗಳಿಂದಲೇ ಮಾತನಾಡುತ್ತಿದ್ದೀರಿ...ಇನ್ನೊಂದು ವರ್ಷ ಮದುವೆಗೆ ಕಾಯಬೇಕಾ? ಎಂಬ ಪ್ರಶ್ನೆ ಕೇಳಿದಾಗ ನನಗೆ ಸರಿಯಾದ ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ ಎಂದು 43ರ ಹರೆಯದ ರಾಹುಲ್ ಹೇಳಿದ್ದಾರೆ.

ಹಾಗಾದರೆ ನಿಮಗೆ ಇಲ್ಲಿಯವರೆಗೂ ಸರಿಯಾದ ಹುಡುಗಿ ಸಿಕ್ಕಿಲ್ಲವೆ? ಎಂದು ಮರುಪ್ರಶ್ನೆಯೆಸೆದಾಗ, ನನಗೆ ಸರಿಯಾದ ಹುಡುಗಿ ಸಿಕ್ಕಿಬಿಟ್ಟರೆ, ಮದುವೆಯಾಗ್ತೀನಿ ಎಂದು ಹೇಳಿದ ರಾಹುಲ್ ಸಹೋದರಿ ಪ್ರಿಯಾಂಕಾಳಂತೆ ಹೆಚ್ಚು ಹಿಂದೀ ಸಿನಿಮಾ ನೋಡಲ್ವಂತೆ.

ಆದಾಗ್ಯೂ, ನಿಮ್ಮ ಫೇವರಿಟ್ ನಟ/ನಟಿ ಯಾರು? ಎಂದು ಕೇಳಿದಾಗ ನಾನು ಒಳ್ಳೆಯ ನಟನೆಯನ್ನು ಇಷ್ಟಪಡುತ್ತೇನೆ ಎಂದು ರಾಹುಲ್ ಉತ್ತರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement