ಮೋದಿಗೆ ಪ್ರಧಾನಿಯಾಗುವ ಆತುರ: ರಾಮ್ದೇವ್
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ..
ನಾಗ್ಪುರ್: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಆತುರದಲ್ಲಿದ್ದಾರೆ ಎಂದು ಯೋಗ ಗುರು ಬಾಬಾ ರಾಮ್ದೇವ್ ಅವರು ಹೇಳಿದ್ದಾರೆ.
ಬಹಿರಂಗವಾಗಿಯೇ ಬಿಜೆಪಿಗೆ ಬಂಬಲ ಘೋಷಿಸಿರುವ ಬಾಬಾ ರಾಮ್ದೇವ್, ಮೋದಿ ದೇಶದ ಪ್ರಧಾನಿಯಾಗುವ ತರಾತುರಿಯಲ್ಲಿದ್ದಾರೆ. ಆದರೆ ಅವರು ಇಷ್ಟೊಂದು ಆತುರ ಪಡುವುದು ಸರಿಯಲ್ಲಿ. ಅವರಿಗೆ ಸಂಯಮ ಇರಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಒಬ್ಬ ಸ್ವಚ್ಛ ಮತ್ತು ನೇರ ನುಡಿಯ ಮನುಷ್ಯ ಎಂದು ಹೊಗಳಿದ್ದಾರೆ.
ಇನ್ನು ತಮ್ಮ ಅಭಿಮಾನಿ ನಿಶಿಕಾಂತ್ ಯಾದವ್ ಅವರಿಗೆ ಪಾಟ್ಲಿಪುತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿರುವುದರ ಬಗ್ಗೆ ಯೋಗ ಗುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲುರಂತಹ ಕಳಂಕಿತರಿಗೆ ಟಿಕೆಟ್ ನೀಡಲಾಗಿದೆ. ಆದರೆ ತಮ್ಮ ಅಭಿಮಾನಿಗೆ ಟಿಕೆಟೆ ನೀಡಿಲ್ಲ ಎಂದರು.