ಮೋದಿಗೆ ವಿಕಿಲೀಕ್ಸ್‌ನ ಸರ್ಟಿಫಿಕೇಟ್ ಬೇಡ: ಬಿಜೆಪಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಜಯಗಳಿಸಲು ಅವರಿಗೆ ವಿಕಿಲೀಕ್ಸ್‌ನಿಂದಲೋ ಅಥವಾ ಅದರ ...
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಜಯಗಳಿಸಲು ಅವರಿಗೆ ವಿಕಿಲೀಕ್ಸ್‌ನಿಂದಲೋ ಅಥವಾ ಅದರ ಮಾಲೀಕ ಜೂಲಿಯನ್ ಅಸ್ಸಾಂಜ್‌ನಿಂದಲೋ ಪ್ರಮಾಣಪತ್ರ ಬೇಡ ಎಂದು ಬಿಜೆಪಿ ನಾಯಕ ಅಬ್ಬಾಸ್ ನಖ್ವೀ ಸೋಮವಾರ ಹೇಳಿದ್ದಾರೆ.
ನಮ್ಮ ದೇಶ ಅವರಿಂದ (ವಿಕಿಲೀಕ್ಸ್) ನಿಂದ ಪ್ರಮಾಣ ಪತ್ರ ಕೇಳಿಲ್ಲ, ಅವರು ನಮಗೆ ಪ್ರಮಾಣಪತ್ರ ನೀಡುವ ಅಗತ್ಯವೂ ಇಲ್ಲ. ಅಭಿವೃದ್ಧಿ ಬಯಸುವ ಸರ್ಕಾರಕ್ಕಾಗಿ ಮೋದಿ ಗೆಲ್ಲಬೇಕೆಂದು ಜನರು ಬಯಸಿದ್ದಾರೆ ಎಂದು ನಖ್ವೀ ಹೇಳಿದ್ದಾರೆ.
ಏತನ್ಮಧ್ಯೆ,ತಾವು 2011ರಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಮೋದಿಯೊಬ್ಬರೇ ಪ್ರಾಮಾಣಿಕ ರಾಜಕಾರಣಿ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ವಿಕಿಲೀಕ್ಸ್ ಇಂದು ಸ್ಪಷ್ಟನೆ ನೀಡಿದೆ.
ಅಮೆರಿಕಾಗೆ ಮೋದಿಯವರ ಬಗ್ಗೆ ಭಯವಿದೆ. ಮೋದಿ ಪ್ರಾಮಾಣಿಕ ವ್ಯಕ್ತಿ ಎಂದು ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಹೇಳಿದ್ದಾರೆ ಎಂಬ ಸುದ್ದಿ ಈ ಹಿಂದೆ ಬಿತ್ತರವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಿಕಿಲೀಕ್ಸ್ ತಾವೆಂದೂ ಮೋದಿಯವರನ್ನು ಹಾಡಿ ಹೊಗಳಿಲ್ಲ ಎಂದು ಸ್ಪಷ್ಟನೆ ನೀಡಿದೆ.