ವಿಶ್ವ ಟಿ20 ಕಿರೀಟ ಗೆದ್ದ ನಂತರ ನಿವೃತ್ತಿ ಬಯಸುತ್ತೇನೆ: ಸಂಗಕ್ಕಾರ
ತಾನು ನಿವೃತ್ತಿ ಹೊಂದುವುದಕ್ಕೆ ಇದು ಸೂಕ್ತವಾದ ಕಾಲವಾಗಿದ್ದು, ಬಾಂಗ್ಲಾದೇಶದಲ್ಲಿ ನಡೆಯುವ ಐಸಿಸಿ ವಿಶ್ವಕಪ್ ಟಿ20 ಕಿರೀಟ ಗೆದ್ದ ...
ಬಾಂಗ್ಲಾದೇಶ: ತಾನು ನಿವೃತ್ತಿ ಹೊಂದುವುದಕ್ಕೆ ಇದು ಸೂಕ್ತವಾದ ಕಾಲವಾಗಿದ್ದು, ಬಾಂಗ್ಲಾದೇಶದಲ್ಲಿ ನಡೆಯುವ ಐಸಿಸಿ ವಿಶ್ವಕಪ್ ಟಿ20 ಕಿರೀಟ ಗೆದ್ದ ನಂತರವೇ ತಾನು ನಿವೃತ್ತಿ ಹೊಂದಲು ಬಯಸುತ್ತೇನೆ ಎಂದು ಶ್ರೀಲಂಕಾ ಬ್ಯಾಟ್ಸ್‌ಮೆನ್ ಕುಮಾರ ಸಂಗಕ್ಕಾರ ಹೇಳಿದ್ದಾರೆ.
ಈ ಮೂಲಕ ತನ್ನ ನಿವೃತ್ತಿ ನಿರ್ಧಾರದ ಬಗ್ಗೆ ಆಯ್ಕೆಗಾರರಿಗೆ ಯೋಚಿಸಲು ಇನ್ನಷ್ಟು ಕಾಲಾವಕಾಶ ಸಿಗಲಿದೆ ಎಂದು 36ರ ಹರೆಯದ ಸಂಗಕ್ಕಾರ ಹೇಳಿದ್ದಾರೆ.
ಅದೇ ವೇಳೆ ಮಾಜಿ ನಾಯಕ ಮಹೇಲಾ ಜಯವರ್ಧನೆ ಕೂಡಾ ಏಪ್ರಿಲ್ 6ಕ್ಕೆ ಮುಗಿಯುವ ಟಿ20 ವಿಶ್ವಕಪ್‌ನ ನಂತರ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಎರಡು ಬಾರಿ ಫೈನಲ್ ಪ್ರವೇಶಿಸಿದ್ದು ಪಾಕಿಸ್ತಾನ (2009) ಮತ್ತು ವೆಸ್ಟ್ ಇಂಡೀಸ್ (2012) ವಿರುದ್ಧ ಪರಾಭವಗೊಂಡಿತ್ತು.