ಶಿವ ಸೇನಾ ವಕ್ತಾರ ಎನ್‌ಸಿಪಿಗೆ ಸೇರ್ಪಡೆ
ಶಿವ ಸೇನಾ ವಕ್ತಾರ ರಾಹುಲ್ ನರ್ವೇಕರ್ ಸೋಮವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಶಾಸಕಾಂಗ ಕೌನ್ಸಿಲ್...
ಮುಂಬೈ: ಶಿವ ಸೇನಾ ವಕ್ತಾರ ರಾಹುಲ್ ನರ್ವೇಕರ್ ಸೋಮವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಶಾಸಕ ಕೌನ್ಸಿಲ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ, ತಮ್ಮ ನಾಮ ನಿರ್ದೇಶನ ಪತ್ರವನ್ನು ವಾಪಸ್ ಪಡೆಯುವಂತೆ ಪಕ್ಷದ ಹೈಕಮಾಂಡ್ ಆದೇಶಿಸಿದಕ್ಕೆ ಬೇಸರಗೊಂಡು ನರ್ವೇಕರು ಶಿವಸೇನೆಯನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಎನ್‌ಸಿಪಿ ಪುಣೆಯ ಮಾವಲ್ ಲೋಕಸಭಾ ಕ್ಷೇತ್ರದಲ್ಲಿ ನರ್ವೇಕರ್ ಅವರನ್ನು ಕಣಕ್ಕಿಳಿಸಲಿದೆ.
ಶಿವಸೇನಾ ನಾಯಕ ಎನ್‌ಸಿಪಿಗೆ ಸೇರುವುದಾಗಿ ಈ ಮೊದಲೇ ಸುದ್ದಿ ಇತ್ತು. ಆದರೆ ಸೋಮವಾರ ಪತ್ರಿಕಾಗೋಷ್ಠಿ ಕರೆದ ನರ್ವೇಕರ್ ಎನ್‌ಸಿಪಿ ಅಧಿಕೃತವಾಗಿ ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ.