ಇಶ್ರತ್ ಪ್ರಕರಣ: ಗುಜರಾತಿನ ಮಾಜಿ ಸಚಿವರ ವಿರುದ್ದ ಸಿಬಿಐ ತನಿಖೆ
ಇಶ್ರತ್ ಜಾನ್ ನಕಲಿ ಎನ್ಕೌಂಟರ್...
ನವದೆಹಲಿ: ಇಶ್ರತ್ ಜಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ ಗುಜರಾತಿನ ಮಾಜಿ ಸಚಿವ ವಿರುದ್ಧ ತನಿಖೆ ಆರಂಭಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಗುಜರಾತಿನ ಮಾಜಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಸಿಡಿಯೊಂದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿರುವ ಸಿಡಿಯಲ್ಲಿನ ಸಂಭಾಷಣೆ 2011ರಲ್ಲಿ ನಡೆದಿದ್ದು, ಗುಜರಾತ್ ಹೈಕೋರ್ಟ್ ಈ ತನಿಖೆಗೆ ರಚಿಸಲಾಗಿದ್ದ ಎಸ್ಐಟಿ ತನ್ನ ತನಿಖಾ ಕಾರ್ಯ ಆರಂಭಿಸುವ ಮುನ್ನ ಈ ಸಂಭಾಷಣೆ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಈ ಸಿಡಿಯಲ್ಲಿನ ಸಂಭಾಷಣೆ ಸುಮಾರು 70 ನಿಮಿಷಗಳ ಕಾಲ ನಡೆದಿದ್ದು, ಈ ಸಂಭಾಷಣೆಯಲ್ಲಿ ತೊಡಗಿಕೊಂಡಿರುವ ಅಥವಾ ಈ ಸಂಭಾಷಣೆಗೆ ಸಂಬಂಧಪಟ್ಟವರ ವಿರುದ್ಧ ಸಿಬಿಐ ತನಿಖೆ ನಡೆಸಲಿದೆ.
ಉಗ್ರರೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಇಶ್ರತ್ ಜಾನ್ ಸೇರಿದಂತೆ ನಾಲ್ವರನ್ನು 2004 ಜೂನ್ 15ರಂದು ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಎನ್ಕೌಂಟರ್ ಮಾಡಿದ್ದರು.