ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಿ-8ರ ಒಕ್ಕೂಟದಿಂದ ರಷ್ಯಾ ಅಮಾನತು

ಜಿ-8ರ ಜಾಗತಿಕ ಶಕ್ತಿಗಳ ಒಕ್ಕೂಟದಿಂದ ರಷ್ಯಾವನ್ನು ಅಮಾನತುಗೊಳಿ...

Vishwanath S
Updated On : 18 Mar 2014, 7:50 am

ಪ್ಯಾರಿಸ್: ಜಿ-8ರ ಜಾಗತಿಕ ಶಕ್ತಿಗಳ ಒಕ್ಕೂಟದಿಂದ ರಷ್ಯಾವನ್ನು ಅಮಾನತುಗೊಳಿಸಲಾಗಿದೆ ಎಂದು ಫ್ರಾನ್ಸ್ ವಿದೇಶಾಂಗ ಸಚಿವರು ಮಂಗಳವಾರ ತಿಳಿಸಿದ್ದಾರೆ.

ಕ್ರಿಮಿಯಾ ದ್ವೀಪವನ್ನು ವಶಪಡಿಸಿಕೊಳ್ಳಲು ರಷ್ಯಾ ಮತ್ತು ಉಕ್ರೇನ್ ದಾಳಿ ಭೀತಿಯ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಸೋಚಿಯಲ್ಲಿ ನಡೆಯಲಿರುವ ಜಿ-8 ಶೃಂಗಸಭೆಗೆ ರಷ್ಯಾವನ್ನು ಅಮಾನತುಗೊಳಿಸಲು ಉಳಿದ ಎಳು ರಾಷ್ಟ್ರಗಳು ತೀರ್ಮಾನಿಸಿದ್ದು, ರಷ್ಯಾವನ್ನು ಹೊರತುಪಡಿಸಿ ಇನ್ನುಳಿದ ಏಳು ರಾಷ್ಟ್ರಗಳು ಒಂದೂಗೂಡಲಿವೆ ಎಂದರು.

ಮುಂದಿನ ಶೃಂಗಸಭೆಯಿಂದ ರಷ್ಯಾವನ್ನು ದೂರವಿರಿಸಲು ನಿರ್ಧರಿಸಲಾಗಿದ್ದು, ಮುಂದಿನ ಜಿ-8ರ ಸಭೆಯಲ್ಲಿ ಉಳಿದ ಏಳು ರಾಷ್ಟ್ರಗಳು ಮಾತ್ರ ಭಾಗವಹಿಸಲಿವೆ ಎಂದು ಫ್ರಾನ್ಸ್‌ನ ಲಾರೆಂಟ್ ಫೇಬಿಯಾಸ್ ಯೂರೋಪ್‌ನ ರೋಡಿಯೊ ಮೂಲಕ ತಿಳಿಸಿದ್ದು, ಮತ್ತಷ್ಟು ಮಾಹಿತಿಯನ್ನು ನೀಡಲು ಫೇಬಿಯಾಸ್ ನಿರಾಕರಿಸಿದೆ.

ಏತನ್ಮಧ್ಯೆ ಅಮೆರಿಕ ಮತ್ತು ಯೂರೋಪಿನ್ ಒಕ್ಕೂಟಗಳು ಕ್ರಿಮಿಯಾ ಪರ್ಯಾಯ ದ್ವೀಪದ ಮೇಲಿನ ರಷ್ಯಾ ಕ್ರಮಗಳನ್ನು ವಿರೋಧಿಸಿ ಹೊಸ ನಿರ್ಬಂಧಗಳನ್ನು ಪ್ರಕಟಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement