ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಚಿವ, ನಟ ಅಂಬರೀಷ್ ಮಾತಾಡಿದ್ರು...

"ನಮಸ್ಕಾರ, ಎಲ್ಲರಿಗೂ ನಿಮ್ಮ ಅಂಬರೀಷನ ನಮಸ್ಕಾರ. ನಿಮಗೆಲ್ಲ ತಿಳಿದಿರೋ ಹಾಗೆ ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು....

Rashmi Kasaragodu
Updated On : 18 Mar 2014, 12:22 pm

ಸಿಂಗಾಪುರ್ (ಮೌಂಟ್ ಎಲಿಜಬೆತ್ ಆಸ್ಪತ್ರೆ ) : "ನಮಸ್ಕಾರ, ಎಲ್ಲರಿಗೂ ನಿಮ್ಮ ಅಂಬರೀಷನ ನಮಸ್ಕಾರ. ನಿಮಗೆಲ್ಲ ತಿಳಿದಿರೋ ಹಾಗೆ ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ನನ್ನ ಅಭಿಮಾನಿಗಳು, ಹಿರಿಯರು ಮತ್ತು ಸ್ನೇಹಿತರು ಆತಂಕಗೊಂಡಿದ್ದರು. ನಾನೀಗ ಗುಣಮುಖನಾಗಿದ್ದೇನೆ. ನಾನಿನ್ನು ಒಂದು ವಾರ ಆಸ್ಪತ್ರೆಯಲ್ಲಿರಬೇಕಾಗಿದೆ. ನಾನು ಗುಣಮುಖನಾಗಿ ಬರುತ್ತೇನೆ. ವಿಕ್ರಂ ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗಳಿಗೆ ಕೃತಜ್ಞತೆಗಳು. ರಾಜ್ಯ ಸರ್ಕಾರಕ್ಕೆ ನಾನು ಚಿರಋಣಿ. ವಿಶ್ರಾಂತಿ ಬಳಿಕ ನಾನು ಆದಷ್ಟು ಬೇಗ ತಾಯ್ನಾಡಿಗೆ ಬರುತ್ತೇನೆ" -ಇದು ವಸತಿ ಸಚಿವ, ನಟ ಅಂಬರೀಷ್ ಅವರ ಮಾತುಗಳು.

ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಬರೀಷ್ ಈಗ ಚೇತರಿಸಿಕೊಂಡಿದ್ದಾರೆ.  ಮಂಗಳವಾರ ಅಂಬಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಸಿಡಿಯೊಂದನ್ನು ಮಾಧ್ಯಮದವರಿಗೆ ನೀಡಲಾಗಿದ್ದು, ಈ ಸಿಡಿಯಲ್ಲಿ ಅಂಬಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ನಂತರ ಇದೇ ಮೊದಲ ಬಾರಿಗೆ ಅಂಬಿ ಮಾತನಾಡಿದ್ದನ್ನು ನೋಡಿ, ಅಭಿಮಾನಿಗಳು ಖುಷಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement