ಭಾರತೀಯ ಟೆಕ್ಕಿಗೆ ಸಿಕ್ಕಿತೇ ನಾಪತ್ತೆಯಾದ ವಿಮಾನದ ಫೋಟೋ?
ಹೈದ್ರಾಬಾದ್ ಮೂಲದ ಅನೂಪ್ ಮಾಧವ್ ಯೆಗ್ಗಿನ ಎಂಬ ಸಾಫ್ಟ್ವೇರ್ ಇಂಜಿನಿಯರ್ ನಾಪತ್ತೆಯಾಗಿರುವ ವಿಮಾನದ ಸ್ಯಾಟಲೈಟ್...
ಹೈದ್ರಾಬಾದ್: ಹೈದ್ರಾಬಾದ್ ಮೂಲದ ಅನೂಪ್ ಮಾಧವ್ ಯೆಗ್ಗಿನ ಎಂಬ ಸಾಫ್ಟ್ವೇರ್ ಇಂಜಿನಿಯರ್ ನಾಪತ್ತೆಯಾಗಿರುವ ವಿಮಾನದ ಸ್ಯಾಟಲೈಟ್ ಫೋಟೋವೊಂದನ್ನು ಸಿಎನ್ಎನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಈತ ನಾಪತ್ತೆಯಾಗಿರುವ ವಿಮಾನದ ಕುರುಹಿಗಾಗಿ ಸರ್ಚ್ ಮಾಡುತ್ತಿದ್ದಾಗ ಈ ಫೋಟೋ ಸಿಕ್ಕಿದೆ ಎನ್ನಲಾಗುತ್ತಿದೆ. ಮಾರ್ಚ್ 8ರಂದು ಅಂಡಮಾನ್ ದ್ವೀಪಗಳ ಮೇಲೆ ಹಾರುಡುತ್ತಿರುವ ವಿಮಾನವೊಂದರ ಚಿತ್ರ ಈತನಿಗೆ ಲಭಿಸಿದ್ದು, ಇದು ಮಲೇಷ್ಯಾ 777 ಬೋಯಿಂಗ್ ವಿಮಾನವೆಂದು ಅನೂಪ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
200 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಮಲೇಷ್ಯಾ ವಿಮಾನ ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಸಿಎನ್ಎನ್ ವೆಬ್ಸೈಟ್ 'ಕ್ರೌಡ್ ಸೋರ್ಸಿಂಗ್' ಪ್ರಾಜೆಕ್ಟ್ ಆರಂಭಿಸಿತ್ತು. ಅನೂಪ್ ಅವರಿಗೆ ಸಿಕ್ಕಿರುವ ಈ ಸೆಟಲೈಟ್ ಚಿತ್ರವನ್ನು ಅವರ ಒಂದು ಬರಹದೊಂದಿಗೆ ಸಿಎನ್ಎನ್ ಪ್ರಸಾರ ಮಾಡಿದೆ,
ಮಲೇಷ್ಯಾ ವಿಮಾನ ನಾಪತ್ತೆಯಾಗಿ 11 ದಿನಗಳು ಕಳೆದರೂ ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನಾಪತ್ತೆಯಾದ ವಿಮಾನದ ಹುಡುಕಾಟದಲ್ಲಿ 26 ರಾಷ್ಟ್ರಗಳು ಕೈಜೋಡಿಸಿದ್ದರೂ ಯಾರಿಗೂ ಯಾವುದೇ ಸುಳಿವು ಸಿಕ್ಕಿಲ್ಲ.