ಮೋದಿ ನರ್ಸರಿ ವಿದ್ಯಾರ್ಥಿ: ಖುರ್ಷಿದ್
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನರ್ಸರಿ ವಿದ್ಯಾರ್ಥಿ ಎಂದು ಹೇಳುವ ಮೂಲಕ ವಿದೇಶಾಂಗ..
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನರ್ಸರಿ ವಿದ್ಯಾರ್ಥಿ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೊಸ ವಿವಾದ ಸೃಷ್ಟಿಸಿದ್ದಾರೆ.
2002 ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮೋದಿಗೆ ಕ್ಲೀನ್ಚಿಟ್ ಸಿಕ್ಕಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಖುರ್ಷಿದ್, ಹೆಚ್ಚು ಅಂಕಗಳನ್ನು ಗಳಿಸಿದ ನರ್ಸರಿ ವಿದ್ಯಾರ್ಥಿ ತಾನು ಡಾಕ್ಟರ್ ಮತ್ತು ತನಗೆ ಪಿ ಹೆಚ್ಡಿ ಸಿಕ್ಕಿದೆ ಎಂದು ಬೀಗುವಂತಿದೆ ಮೋದಿ ನಡೆ ಎಂದು ಕುಹಕವಾಡಿದ್ದಾರೆ.
ಕಳೆದ ತಿಂಗಳು ಖುರ್ಷಿದ್ ಮೋದಿ ಅವರನ್ನು ನಪುಂಸಕ ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಆದಾಗ್ಯೂ, ಖುರ್ಷಿದ್ ಅವರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ರೀತಿಯ ಕಾಮೆಂಟ್ಗಳನ್ನು ಮಾಡಬಾರದೆಂದು ಹೇಳಿದ್ದರು.
ಖುರ್ಷಿದ್ ಅವರ ಈ ಮಾತನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.