ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಖುಷ್ವಂತ್ ಸಿಂಗ್ ಇನ್ನಿಲ್ಲ

ಖ್ಯಾತ ಲೇಖಕ , ಪತ್ರಕರ್ತ ಖುಷ್ವಂತ್ ಸಿಂಗ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು....

Rashmi Kasaragodu
Updated On : 20 Mar 2014, 2:09 am

ನವದೆಹಲಿ: ಖ್ಯಾತ ಲೇಖಕ , ಪತ್ರಕರ್ತ ಖುಷ್ವಂತ್ ಸಿಂಗ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.

ಭಾರತದ ಖ್ಯಾತ ಲೇಖಕ ಹಾಗು ಅಂಕಣಕಾರರಾಗಿದ್ದ ಖುಷ್ವಂತ್ ಸಿಂಗ್ ಫೆ.2 ರಂದು ಈಗ ಪಾಕಿಸ್ತಾನದ ಪಾಲಾಗಿರುವ ಪಂಜಾಬ್‌ನ ಹಡಾಲಿಯಲ್ಲಿ ಜನಿಸಿದ್ದರು.

ಯೋಜನಾ ಹಾಗು ಇಲ್ಯುಸ್ಟ್ರೇಟೆಡ್ ವೀಕ್ಲಿ, ದ ನ್ಯಾಷನಲ್ ಹೆರಾಲ್ಡ್, ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಸಂಪಾದಕರಾಗಿದ್ದ ಖುಷ್ವಂತ್ ಸಿಂಗ್ ತಮ್ಮ ತೀಕ್ಷ್ಣ ಬರಹಗಳಿಂದಲೇ ಖ್ಯಾತರಾದವರು. ಟ್ರೈನ್ ಟು ಪಾಕಿಸ್ತಾನ್,  I Shall Not Hear the Nightingale ಮತ್ತು ಡೆಲ್ಲಿ ಮೊದಲಾದ ಕ್ಲಾಸಿಕ್‌ಗಳನ್ನು ರಚಿಸಿದ್ದ ಸಿಂಗ್, 95 ನೇ ವಯಸ್ಸಿನಲ್ಲಿ ದ ಸನ್‌ಸೆಟ್ ಕ್ಲಬ್ ಎಂಬ ಕಾದಂಬರಿ ಬರೆದಿದ್ದರು.

ಸಿಖ್ಖರ ಧರ್ಮ, ಸಂಸ್ಕೃತಿಯ ಬಗ್ಗೆ ಬರೆದ "A History of the Sikhs" ಎಂಬ ನಾನ್- ಫಿಕ್ಷನ್ ಎರಡು ಸಂಪುಟಗಳಲ್ಲಿ ಪ್ರಕಟವಾಗಿತ್ತು. 2002ರಲ್ಲಿ ಅವರ ಆತ್ಮಕತೆ "Truth, Love and a Little Malice" ಪ್ರಕಟವಾಗಿತ್ತು.


1980-1986ರ ಅವಧಿಯಲ್ಲಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದ ಸಿಂಗ್‌ಗೆ 1974ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು. ಆದರೆ ಭಾರತೀಯ ಸೇನೆ ಅಮೃತ್‌ಸರದ ಸ್ವರ್ಣ ಮಂದಿರದಲ್ಲಿ ನಡೆಸಿದ ಗೋಲಿಬಾರ್‌ನ್ನು ಖಂಡಿಸಿ 1984ರಲ್ಲಿ ಪ್ರಶಸ್ತಿಯನ್ನು ವಾಪಸ್ ಮಾಡಿದ್ದರು.

2007ರಲ್ಲಿ ಅವರಿಗೆ ಪದ್ಮ ವಿಭೂಷಣ್ ನೀಡಿ ಗೌರವಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement