ಧನಂಜಯ್ ಕುಮಾರ್ ಸೇರಿ ಜೆಡಿಎಸ್ನ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ..
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಕೇಂದ್ರದ ಮಾಜಿ ಸಚಿವ ವಿ.ಧನಂಜಯ್ ಕುಮಾರ್ ಸೇರಿದಂತೆ ಜೆಡಿಎಸ್ನ 15 ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದ 15 ಲೋಕಸಭಾ ಕ್ಷೇತ್ರಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಇಂದು ಪ್ರಕಟಿಸಿದರು. ಇದೇ ವೇಳೆ ಧನಂಜಯ್ ಕುಮಾರ್ ಅವರು ಜೆಡಿಎಸ್ ಸೇರ್ಪಡೆಯಾದರು.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
1. ಹಾಸನ- ಎಚ್.ಡಿ.ದೇವೇಗೌಡ
2. ತುಮಕೂರು- ಎ,ಕೃಷ್ಣಪ್ಪ
3. ಉಡುಪಿ, ಚಿಕ್ಕಮಗಳೂರು- ಧನಂಜಯ್ ಕುಮಾರ್
4. ಗುಲ್ಬರ್ಗಾ- ಡಿ.ಜಿ.ಸಾಗರ್
5. ರಾಯಚೂರು- ರಾಜಾ ಅಮರೇಶ್ ನಾಯಕ್
6. ಮಂಡ್ಯ- ಸಿ.ಎಸ್.ಪುಟ್ಟರಾಜು
7. ಚಿಕ್ಕೋಡಿ- ಶ್ರೀಮಂತ ಬಾಳಾ ಸಾಹೇಬ್ ಪಾಟೀಲ್
8. ಚಿತ್ರದುರ್ಗ- ಗೂಳಿಹಟ್ಟಿ ಶೇಖರ್
9. ಉತ್ತರ ಕನ್ನಡ -ಶಿವಾನಂದ ನಾಯ್ಕ್
10. ಬೆಂಗಳೂರು ಗ್ರಾಮಾಂತರ- ಪ್ರಭಾಕರ್ ರೆಡ್ಡಿ
11. ಕೋಲಾರ- ಕೇಶವ
12. ಚಾಮರಾಜನಗರ- ಎಂ.ಶಿವಣ್ಣ
13. ಶಿವಮೊಗ್ಗ - ಗೀತಾ ಶಿವರಾಜ್ ಕುಮಾರ್
14. ಹಾವೇರಿ- ರವಿ ಮೆಣಸಿನಕಾಯಿ
15. ಬೀದರ್- ಬಂಡೆಪ್ಪ ಕಾಶೆಂಪುರ