ಜೆಡಿಎಸ್ಗೆ ವಸಂತ ಸಾಲಿಯಾನ್ ಗುಡ್ಬೈ
ಜೆಡಿಎಸ್ ಮಾಜಿ ಶಾಸಕ ವಸಂತ ಸಾಲಿಯಾನ್ ಜೆಡಿಎಸ್ ಪಕ್ಷ ತೊರೆಯುವ ತೀರ್ಮಾನ...
ಬೆಂಗಳೂರು: ಜೆಡಿಎಸ್ ಮಾಜಿ ಶಾಸಕ ವಸಂತ ಸಾಲಿಯಾನ್ ಜೆಡಿಎಸ್ ಪಕ್ಷ ತೊರೆಯುವ ತೀರ್ಮಾನ ಕೈಗೊಂಡಿದ್ದಾರೆ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಹಾಗು ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪಕ್ಷ ಸಂಘಟನೆ ಮಾಡ್ತಿಲ್ಲ ಎಂಬ ಕಾರಣದಿಂದ ವಸಂತ ಸಾಲಿಯಾನ್ ಜೆಡಿಎಸ್ಗೆ ಗುಡ್ಬೈ ಹೇಳಿದ್ದಾರೆ.
ಪಕ್ಷದ ವರಿಷ್ಠರಿಗೆ ರಾಜಿನಾಮೆ ಸಲ್ಲಿಸುವುದಾಗಿ ಹೇಳಿದ ವಸಂತ ಸಾಲಿಯಾನ್ ಮುಂದಿನ 2-3 ದಿನಗಳಲ್ಲಿ ಬೇರೆ ಪಕ್ಷಕ್ಕೆ ಸೇರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.