ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್ ವಿರುದ್ಧಕ್ಕೆ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ...

Vishwanath S
Updated On : 21 Mar 2014, 11:53 am

ಮೀರ್ಪುರ್: ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟ್ ಮಾಡಿದ ಪಾಕಿಸ್ತಾನವನ್ನು ನಿಗದಿತ ಓವರ್‌ಗಳಲ್ಲಿ 130ಗೆ ಕಟ್ಟಿ ಹಾಕಲು ಭಾರತದ ಬೌಲರ್‌ಗಳು ಯಶಸ್ವಿಯಾದರು.  131 ರನ್‌ಗಳ ಸುಲಭ ಗುರಿಯನ್ನು ಬೇನ್ನತ್ತಿದ ಭಾರತ ತಂಡದ ಮೊದಲ ಆಟಗಾರರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ 54 ರನ್‌ಗಳ ಜೊತೆಯಾಟ ನೀಡಿದರು.

ಶಿಖರ್ ಧವನ್ 30 ರನ್ ಗಳಿಸಿ ಓಟಾದರೆ, ರೋಹಿತ್ ಶರ್ಮ 24 ರನ್ ಗಳಿಸಿ ನಿರ್ಗಮಿಸಿದರು. ಆ ನಂತರ ಬಂದ ಭರವಸೆಯ ಆಟಗಾರ ಯುವರಾಜ್ ಸಿಂಗ್ ಒಂದಾಂಕಿ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಅವರ 66 ರನ್ ಜೊತೆಯಾಟದಿಂದಾಗಿ ಭಾರತ 18.3 ಓವರ್‌ಗಳಲ್ಲಿ ಗುರಿ ಮುಟ್ಟಿ ಗೆಲುವಿನ ನಗೆ ಬೀರಿತು.

ಉತ್ತಮವಾಗಿ ಬೌಲಿಂಗ್ ಮಾಡಿ 2 ವಿಕೆಟ್ ಪಡೆದ ಅಮಿತ್ ಮಿಶ್ರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement