ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲೋಕಸಮರ: ನಂದನ್ ನಿಲೇಕಣಿ ಅತ್ಯಂತ ಶ್ರೀಮಂತ ಅಭ್ಯರ್ಥಿ

ಈ ಬಾರಿ ರಾಜ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದವರ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ..

Lingaraj Badiger
Updated On : 21 Mar 2014, 2:22 am

ಬೆಂಗಳೂರು: ಈ ಬಾರಿ ರಾಜ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದವರ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಎಲ್ಲರಿಗಿಂತ ಶ್ರೀಮಂತ ಹುರಿಯಾಳು.

'ಆಧಾರ್‌' ಯೋಜನೆಯ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರು ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಹಾಗೂ ಪತ್ನಿ ರೋಹಿಣಿ ನಿಲೇಕಣಿಯ ಒಟ್ಟು ಆಸ್ತಿ 7,700 ಕೋಟಿ ರುಪಾಯಿ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.

'ಐಐಟಿಯಲ್ಲಿ ನಾನು ನನ್ನ ಪದವಿ ಮುಗಿಸಿಕೊಂಡ ಹೊರಬಂದಾಗ ನನ್ನ ಜೇಬಿನಲ್ಲಿ ಕೇವಲು 200 ರುಪಾಯಿ ಮಾತ್ರ ಇತ್ತು. 10 ಸಾವಿರ ರುಪಾಯಿ ಬಂಡವಾಳದೊಂದಿಗೆ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಿದೇವು' ಎಂದು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ನಿಲೇಕಣಿ ದಂಪತಿ ಹೇಳಿಕೊಂಡಿದ್ದಾರೆ.

ನಿಲೇಕಣಿ ಹೊಂದಿರುವ ಒಟ್ಟು 7,700 ಕೋಟಿ ಆಸ್ತಿಯಲ್ಲಿ ಶೇ.80ರಷ್ಟು ಆಸ್ತಿ ಇನ್ಫೋಸಿಸ್‌ನಲ್ಲಿ ಹೂಡಿಕೆಯಾಗಿದೆ. ಈಗಲೂ ನಂದನ್ ನಿಲೇಕಣಿ ಅವರು ಇನ್ಫೋಸಿಸ್‌ನಲ್ಲಿ ಶೇ1.45ರಷ್ಟು ಹಾಗೂ ಪತ್ನಿ ರೋಹಿಣಿ ಅವರು ಶೇ.1.3ರಷ್ಟು ಶೇರ್‌ಗಳನ್ನು ಹೊಂದಿದ್ದಾರೆ.

ನನ್ನ ಪ್ರಕಾರ, ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಸ್ವತಂತ್ರವಾಗಿ ಏನಾದರೂ ಮಾಡಬೇಕು ಎಂಬುದಕ್ಕೆ ಇನ್ಫೋಸಿಸ್ ಕಥೆ ಯುವ ಜನತೆಗೆ ಪ್ರೇರಣೆಯಾಗಿದೆ. ಇದರಿಂದ ದೇಶದ ಅಭಿವೃದ್ಧಿ ಹಾಗೂ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನಿಲೇಕಣಿ ಹೇಳಿದ್ದಾರೆ.

ನಾವು ಗಳಿಸಿದ್ದರಲ್ಲಿ ಸುಮಾರು 400 ಕೋಟಿಯಷ್ಟು ಹಣವನ್ನು ನಾವು ಸಮಾಜ ಸೇವೆಗಾಗಿ ಹಲವು ಟ್ರಸ್ಟ್‌ಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ದಾನ ಮಾಡಿರುವುದಾಗಿ ನಿಲೇಕಣಿ ದಂಪತಿ ಹೇಳಿಕೊಂಡಿದ್ದಾರೆ.

ಕಳೆದ 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಇನ್ಫೋಸಿಸ್‌ನಿಂದ ಬಂದ ಲಾಭದಲ್ಲಿ ಸಾಕಷ್ಟು ಹಣವನ್ನು ದಾನಧರ್ಮ ಮಾಡಿದ್ದೇನೆ. ನಮ್ಮಿಬ್ಬರಲ್ಲೂ ಪರೋಪಕಾರ ಬುದ್ಧಿ ಇದೆ ಎಂದು ರೋಹಿಣಿ ನಿಲೇಕಣಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement