ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

3ನೇ ವಾರಕ್ಕೆ ಕಾಲಿಟ್ಟರೂ ಪತ್ತೆಯಾಗದ ಮಲೇಷ್ಯಾ ವಿಮಾನ

ಎರಡು ವಾರ ಕಳೆದು ಮೂರನೇ ವಾರಕ್ಕೆ ಕಾಲಿಟ್ಟರೂ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಬಗ್ಗೆ ..

Lingaraj Badiger
Updated On : 22 Mar 2014, 5:06 am

ಕೌಲಲಾಂಪುರ: ಎರಡು ವಾರ ಕಳೆದು ಮೂರನೇ ವಾರಕ್ಕೆ ಕಾಲಿಟ್ಟರೂ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಬಗ್ಗೆ ಯಾವುದೇ ಸುಳಿವು ಸಿಕ್ಲಿಲ್ಲ.

ಚೀನಾದ ಉಪಗ್ರಹ ಹೊಸ ಚಿತ್ರವೊಂದನ್ನು ಪತ್ತೆ ಹಚ್ಚಿದ್ದು, ಅದು ನಾಮಪತ್ತೆಯಾದ ಎಂ.ಎಚ್. 370 ವಿಮಾನದ ಭಾಗವಾಗಿರುಬಹುದು ಎಂದು ಮಲೇಷ್ಯಾ ಸಾರಿಗೆ ಸಚಿವ ಹಿಷುಮ್ಮುದ್ದಿನ್ ಹುಸೇನ್ ಅವರು ಶನಿವಾರ ಹೇಳಿದ್ದಾರೆ.

ಚೀನಾದ ರಾಯಭಾರಿಗಳು ಉಪಗ್ರಹ ಚಿತ್ರವನ್ನು ಸ್ವೀಕರಿಸಿದ್ದಾರೆ ಎಂಬ ಸುದ್ದಿ ಈಗತಾನೆ ನನಗೆ ಬಂದಿದ್ದು, ಚಿತ್ರ ಪರಿಶೀಲಗಾಗಿ ಅವರು ಯುದ್ಧನೌಕೆಗಳನ್ನು ರವಾನಿಸಿದ್ದಾರೆ ಎಂದು ಹಿಷುಮುದ್ದಿನ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ವಿಮಾನದ ಎಷ್ಟು ಬಿಡಿ ಭಾಗಗಳ ಚಿತ್ರಗಳು ಪತ್ತೆಯಾಗಿವೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಇನ್ನು ಕೆಲವೇ ಗಂಟೆಗಳಲ್ಲಿ ಚೀನಾ ಅಧಿಕಾರಿಗಳು ಈ ಕುರಿತು ಅಧಿಕೃತ ಪ್ರಕಟಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ಮಧ್ಯೆ, ಹಿಂದೂ ಮಹಾಸಾಗರದಲ್ಲಿ ನಾಪತ್ತೆಯಾದ ವಿಮಾನದ ಭಾಗಗಳು ಪತ್ತೆಯಾಗಿದ್ದು, ಶೋಧ ಕಾರ್ಯಕ್ಕೆ ಪ್ರಮುಖ ತಿರುವು ದೊರೆತಂತಾಗಿದೆ ಎಂದು ಆಸ್ಟ್ರೇಲಿಯಾ ಹಂಗಾಮಿ ಪ್ರಧಾನಿ ಹೇಳಿದ್ದಾರೆ.

ವಿಮಾನದ ಅವಶೇಷಗಳು ಕೊಚ್ಚಿ ಹೋಗಿರಬಹುದು ಅಥವಾ ಮುಳಿಗಿರುವ ಸಾಧ್ಯತೆಯೂ ಇದೆ. ಆದರೆ ಏನಾದರೂ ಅಲ್ಲಿ ಸಿಗಲೇಬೇಕು. ಸಿಗುತ್ತದೆ ಎಂದು ಆಸ್ಟ್ರೇಲಿಯಾ ಹಂಗಾಮಿ ಪ್ರಧಾನಿ ವಾರೇನ್ ಟ್ರಸ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement