ಕೋಟಿ ಆಸ್ತಿಯಿದ್ದರೂ ಮೇನಕಾ ಗಾಂಧಿಗೆ ಸ್ವಂತ ವಾಹನವಿಲ್ಲ!
ಬಿಜೆಪಿ ಹಿರಿಯ ನಾಯಕಿ, ಸಂಸದೆ ಮೇನಕಾ ಗಾಂಧಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಶನಿವಾರ ಫಿಲಿಬಿಟ್ ಲೋಕಸಭಾ...
ಫಿಲಿಬಿಟ್: ಬಿಜೆಪಿ ಹಿರಿಯ ನಾಯಕಿ, ಸಂಸದೆ ಮೇನಕಾ ಗಾಂಧಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ.
ಶನಿವಾರ ಫಿಲಿಬಿಟ್ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಮೇನಕಾ ಗಾಂಧಿಯವರ ಆಸ್ತಿ ವಿವರಗಳು ಹೀಗಿವೆ.
ಕೈಯಲ್ಲಿರುವ ಹಣ- 39,365 ರು ಮತ್ತು ಬ್ಯಾಂಕ್‌ನಲ್ಲಿರುವ ಹಣ 6.07 ಕೋಟಿ ರು.
ಇವರ ಹೆಸರಲ್ಲಿ 4.51 ಕೋಟಿಯ ಶೇರ್ ಮತ್ತು ಬಾಂಡ್‌ಗಳಿದ್ದು, ರು.23.97 ಲಕ್ಷ ವಿಮೆ ಹಾಗು ಸುಮಾರು ರು. 14.7 ಲಕ್ಷ ಬೆಲೆ ಬಾಳುವ ಒಡವೆಗಳಿವೆ.
.32 ಬೋರ್ ರೈಫಲ್ ಹೊಂದಿರುವ ಅವರು ಯಾವುದೇ ಕೃಷಿ ಭೂಮಿ ಹೊಂದಿಲ್ಲ.
ಸ್ಥಿರಾಸ್ಥಿಯ ಬಗ್ಗೆ ಹೇಳುವುದಾದರೆ ಮೇನಕಾ ಹೆಸರಲ್ಲಿ 6.95 ಕೋಟಿ ಬೆಲೆಯ ಕಮರ್ಷಿಯಲ್ ಅಪಾರ್ಟ್‌ಮೆಂಟ್ ಇದ್ದು , ರು.24.95 ಕೋಟಿಯ ವಸತಿ ಸಮುಚ್ಛಯವಿದೆ.
ಮೇನಕಾ ಗಾಂಧಿ ರು.2.19 ಲಕ್ಷ ಆದಾಯ ತೆರಿಗೆ ಪಾವತಿಸಿದ್ದು, ಇವರು ಯಾವುದೇ ಸ್ವಂತ ವಾಹನಗಳನ್ನು ಹೊಂದಿಲ್ಲ.