ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿ ಟ್ಯಾಂಕರ್ ಸ್ಫೋಟ, 7 ಸಾವು
ಮುಂಬೈ- ಅಹ್ಮದಾಬಾದ್ ಹೈವೇಯಲ್ಲಿ ಶನಿವಾರ ಡೀಸಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 7 ಜನ ಸಾವಿಗೀಡಾಗಿದ್ದಾರೆ. ಶನಿವಾರ...
ಮುಂಬೈ: ಮುಂಬೈ- ಅಹ್ಮದಾಬಾದ್ ಹೈವೇಯಲ್ಲಿ ಶನಿವಾರ ಡೀಸಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 7 ಜನ ಸಾವಿಗೀಡಾಗಿದ್ದಾರೆ. ಶನಿವಾರ ಅಪರಾಹ್ನ ಚರೋಟಿ ನಾಕ ಎಂಬಲ್ಲಿ ಈ ದುರಂತ ಸಂಭವಿಸಿದ್ದು 8 ಜನರಿಗೆ ಗಾಯಗಳಾಗಿವೆ.
ರಿಲಯನ್ಸ್ ಕಂಪನಿಗೆ ಸೇರಿದ (ಜಿಜೆ 6 ಜೆಡ್ ಜೆಡ್ 7918) ಸಂಖ್ಯೆಯ ಟ್ಯಾಂಕರ್ ಅಪರಾಹ್ನ ಸ್ಫೋಟಗೊಂದ್ದು, 6 ವಾಹನಗಳು ಜಖಂಗೊಂಡಿವೆ. ಸ್ಫೋಟದಿಂದ ಪಕ್ಕದ ಹೋಟೆಲ್ಗೂ ಹಾನಿಯಾಗಿದೆ.
ಗುಜರಾತ್ನಿಂದ ಮುಂಬೈಗೆ ಬರುತ್ತಿದ್ದ ಡೀಸಲ್ ಟ್ಯಾಂಕರ್ನಿಂದ ಡೀಸಲ್ ಸೋರಿಕೆಯಾಗಿ ಈ ಸ್ಫೋಟ ಸಂಭವಿಸಿದೆ ಎಂದು ಥಾಣೆ (ಗ್ರಾಮಾಂತರ) ಠಾಣೆಯ ಎಸ್ಪಿ ರಾಜೇಶ್ ಪ್ರಧಾನ್ ಹೇಳಿದ್ದಾರೆ. ಟ್ಯಾಂಕರ್ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ತಾವು ಕಂಪನಿಯ ಅಧಿಕಾರಗಳನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ ಎಂದು ಪ್ರಧಾನ್ ಹೇಳಿದ್ದಾರೆ.