ಆಸ್ಟ್ರೇಲಿಯಾ ವಿರುದ್ಧ ಪಾಕ್‌ಗೆ ರೋಚಕ ಜಯ
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 16 ರನ್‌ಗಳ...
ಢಾಕಾ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 16 ರನ್‌ಗಳ ಅಂತರದಿಂದ ರೋಚಕ ಜಯ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ ಓವರ್‌ಗಳಲ್ಲಿ 191 ರನ್ ಗಳಿಸಿತು. 192 ರನ್ ಬೃಹತ್ ಮೊತ್ತವನ್ನು ಬೇನ್ನತ್ತಿದ್ದ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಡೇವಿಡ್ ವಾರ್ನರ್ ಹಾಗೂ ಶೇನ್ ವ್ಯಾಟ್ಸನ್ ಕೇವಲ 4 ಗಳಿಸಿ ಔಟಾದರು.
ಆದರೆ ಆಸ್ಟ್ರೇಲಿಯಾ ಪತನಕ್ಕೆ ಬ್ರೇಕ್ ಹಾಕಿದ ಮ್ಯಾಕ್ಸ್‌ವೇಲ್ 33 ಎಸೆತಗಳಲ್ಲಿ 74 ರನ್‌ಗಳ ಬೃಹತ್ ಮೊತ್ತದಿಂದಾಗಿ ಗೆಲುವಿನ ದಾರಿ ಸುಗುಮವಾಯಿತು. ಅರೋನ್ ಫಿನ್ಚ್ 54 ಎಸೆತಗಳಲ್ಲಿ 65 ರನ್ ಗಳಿಸಿ ಉತ್ತಮ ಆರಂಭ ಓದಗಿಸಿಕೊಟ್ಟರು. ಆದರೆ ಮ್ಯಾಕ್ಸ್‌ವೆಲ್‌ರ ನಿರ್ಗಮನದೊಂದಿಗೆ ಆಸ್ಟ್ರೇಲಿಯಾ ಸೋಲಿನ ಭೀತಿ ಅನುಭವಿಸಿತು. ಪಾಕ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಆಟಗಾರರು 175 ರನ್‌ಗಳಿಗೆ ಸರ್ವಪತನಗೊಂಡರು. ಇದರೊಂದಿಗೆ ಪಾಕ್ 16 ರನ್‌ಗಳಿಂದ ಜಯ ಗಳಿಸಿತು.