ಪ್ರಹ್ಲಾದ್ ಜೋಶಿ ಮೆರವಣಿಗೆ ವೇಳೆ ಶೂ ಎಸೆತ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ಮೆರವಣಿಗೆ ..
ಧಾರವಾಡ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ಮೆರವಣಿಗೆ ವೇಳೆ ದುಷ್ಕರ್ಮಿಗಳು ಶೂ ಎಸೆದ ಘಟನೆ ಸೋಮವಾರ ಧಾರವಾಡದಲ್ಲಿ ನಡೆಯಿತು.
ಪ್ರಹ್ಲಾದ್ ಜೋಶಿ ಅವರು ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಜೂಬ್ಲಿ ಸರ್ಕಲ್ ಬಳಿ ಜೋಶಿ ಅವರ ವಾಹನದ ಮೇಲೆ ದುಷ್ಕರ್ಮಿಗಳು ಶೂ ಎಸಿದಿದ್ದಾರೆ. ಆದರೆ ಅದೃಷ್ಟವಶಾತ್ ಶೂ ಜೋಶಿ ಅವರಿಗೆ ತಗುಲಿಲ್ಲ.
ಕೂಡಲೇ ಶೂ ಅನ್ನು ಗಮನಿಸಿದ ಜೋಶಿ, ಅದನ್ನು ತೆಗೆದು ಹಾಕುವಂತೆ ಸೂಚಿಸಿದರು. ಆದರೆ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮೋಹನ್ ಲಿಂಬಿಕಾಯಿ ಅವರು, ಇದು ಯಾರೋ ಎಸೆದ ಶೂ ಅಲ್ಲ. ಬದಲಾಗಿ ಯಾರದ್ದೋ ಕಳಚಿ ಬಿದ್ದ ಶೂ ಇರಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.