ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಎಂ ಉಗ್ರ ತೆಹಸೀನ್ ಅಖ್ತರ್ ಬಂಧನ

ಭಾನುವಾರವಷ್ಟೆ ಇಂಡಿಯನ್ ಮುಜಾಹಿದ್ದೀನ್(ಐಎಂ) ಉಗ್ರ ಸಂಘಟನೆ..

Lingaraj Badiger
Updated On : 25 Mar 2014, 2:12 am

ನವದೆಹಲಿ: ಭಾನುವಾರವಷ್ಟೆ ಇಂಡಿಯನ್ ಮುಜಾಹಿದ್ದೀನ್(ಐಎಂ) ಉಗ್ರ ಸಂಘಟನೆಯ ನಾಲ್ವರು ಉಗ್ರರನ್ನು ಬಂಧಿಸಿದ್ದ ದೆಹಲಿ ಪೊಲೀಸರು, ಮಂಗಳವಾರ ಐಎಂ ಉಗ್ರ ಸಂಘಟನೆಯ ಪ್ರಮುಖ ರೂವಾರಿ ತೆಹಸೀನ್ ಅಖ್ತರ್ ಅಲಿಯಾಸ್ ಮೊನುನನ್ನು ಬಂಧಿಸಿದ್ದಾರೆ.

ಯಾಸಿನ್ ಭಟ್ಕಳ್ ಬಂಧನದ ನಂತರ ಉಗ್ರ ಸಂಘಟನೆಯನ್ನು ಮುನ್ನಡೆಸುತ್ತಿದ್ದ ತೆಹಸೀನ್ ಅಖ್ತರ್ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಉಗ್ರ ಯಾಸಿನ್ ಭಟ್ಕಳ್ ನೀಡಿದ ಮಾಹಿತಿ ಆಧಾರದ ಮೇಲೆ ದೆಹಲಿ ಪೊಲೀಸರು ಇಂದು ಅಖ್ತರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ರ್ಯಾಲಿ ವೇಳೆ ಸಂಭವಿಸಿದ ಸ್ಫೋಟದಲ್ಲೂ ಅಖ್ತರ್ ಕೈವಾಡ ಇದೆ ಎನ್ನಲಾಗಿದೆ.

ವಿವಿಧ ಉಗ್ರ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಪಾಕ್ ಪ್ರಜೆ ಜಿಯಾ ಉರ್ ರೆಹಮಾನ್ ಅಲಿಯಾಸ್ ವಖಾಸ್ ಹಾಗೂ ಆತನ ಮೂವರು ಸಹಚರರನ್ನು ರಾಜಸ್ಥಾನದಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಭಾನುವಾರ ಬಂಧಿಸಿತ್ತು. ವಖಾಸ್‌ನನ್ನು ದೆಹಲಿಯ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದೆ. ಇದೇ ವೇಳೆ, ಬಂಧಿತ ಶಂಕಿತ ಉಗ್ರರ ನಿವಾಸಗಳಿಂದ ಭಾರಿ ಪ್ರಮಾಣದ ಸ್ಫೋಟಕಗಳು, ಡಿಟೋನೇಟರ್‌ಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳು/ಟೈಮರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement