ಡಿಎಂಕೆಯಿಂದ ಉಚ್ಚಾಟನೆ: ಹೈಕೋರ್ಟ್ ಮೆಟ್ಟಿಲೇರಿದ ಅಳಗಿರಿ
ಚೆನ್ನೈ: ಡಿಎಂಕೆ ಪಕ್ಷದಿಂದ ಶಾಶ್ವತವಾಗಿ ಉಚ್ಚಾಟನೆಗೊಂಡಿರುವ ಎಂ.ಕೆ. ಅಳಗಿರಿ ಅವರು ತಮ್ಮನ್ನು ಉಚ್ಚಾಟನೆಗೊಳಿಸಿರುವ ಡಿಎಂಕೆ ಕ್ರಮವನ್ನು ಪ್ರಶ್ನಿಸಿ ಮಂಗಳವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಕಾರಣ ಡಿಎಂಕೆಯಿಂದ ಉಚ್ಚಾಟನೆಗೊಂಡಿದ್ದ ಅಳಗಿರಿಯನ್ನು ಇಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಪಕ್ಷದಿಂದ ಅಧಿಕೃತವಾಗಿ ಉಚ್ಚಾಟನೆಗೊಳಿಸಿ ಆದೇಶ ಹೊರಡಿಸಿದ್ದರು.
ಈ ಕ್ರಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿರುವ ಅಳಗಿರಿ ಡಿಎಂಕೆ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.