ಕುಮಾರಸ್ವಾಮಿ ಆಸ್ತಿ ವಿವರ ಬಹಿರಂಗ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ...
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ರಾಮನಗರ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.
ಈ ಆಸ್ತಿ ವಿವರದ ಪ್ರಕಾರ ಕುಮಾರಸ್ವಾಮಿ ಅನಿತಾ ಕುಮಾರಸ್ವಾಮಿಗಿಂತ ಬಡವರಾಗಿದ್ದಾರೆ. 2013-13ನೇ ಸಾಲಿನ ಕುಮಾರಸ್ವಾಮಿ ಅವರ ಸಾಮಾನ್ಯ ಆದಾಯ 6.8 ಲಕ್ಷ ರೂ. ಗಳಿದ್ದರೆ ಕೃಷಿ ಆದಾಯ 12.2 ಲಕ್ಷ ರು. ಇದೆ. ಇನ್ನು ಅನಿತಾ ಕುಮಾರಸ್ವಾಮಿ ಅವರ ಆದಾಯ 1.2 ಕೋಟಿ ರು. ನಷ್ಟಿದೆ.
ಕುಮಾರಸ್ವಾಮಿ ಹಾಗು ಅನಿತಾ ಕುಮಾರಸ್ವಾಮಿ ಆಸ್ತಿ ವಿವರ:
ಕೈಯಲ್ಲಿರುವ ನಗದು: ಕುಮಾರಸ್ವಾಮಿ - 15 ಲಕ್ಷ ರು, ಅನಿತಾ ಕುಮಾರಸ್ವಾಮಿ - 40 ಲಕ್ಷ ರುಪಾಯಿ.
ಬ್ಯಾಂಕ್ ಮತ್ತಿತರ ಠೇವಣಿಗಳು: ಕುಮಾರಸ್ವಾಮಿ - 3.6 ಲಕ್ಷ ರು, ಅನಿತಾ ಕುಮಾರಸ್ವಾಮಿ - 8.4 ಕೋಟಿ ರುಪಾಯಿ.
ಬಾಂಡ್ ಹೂಡಿಕೆಗಳು: ಕುಮಾರಸ್ವಾಮಿ - 1.7 ಕೋಟಿ ರು, ಅನಿತಾ ಕುಮಾರಸ್ವಾಮಿ - 10 ಕೋಟಿ ರುಪಾಯಿ.
ಬೇರೆಯವರಿಗೆ ನೀಡಿರುವ ಸಾಲ: ಕುಮಾರಸ್ವಾಮಿ - 21 ಲಕ್ಷ ರು, ಅನಿತಾ ಕುಮಾರಸ್ವಾಮಿ - 11.3 ಕೋಟಿ ರುಪಾಯಿ.
ಚಿನ್ನಾಭರಣಗಳ ಮೌಲ್ಯ: ಕುಮಾರಸ್ವಾಮಿ - 25 ಲಕ್ಷ ರು, ಅನಿತಾ ಕುಮಾರಸ್ವಾಮಿ - 49 ಲಕ್ಷ ರುಪಾಯಿ.
ಒಟ್ಟು ಚರಾಸ್ತಿ ಮೌಲ್ಯ: ಕುಮಾರಸ್ವಾಮಿ - 2.5 ಕೋಟಿ ರು, ಅನಿತಾ ಕುಮಾರಸ್ವಾಮಿ - 100 ಕೋಟಿ ರುಪಾಯಿ.
ಶಿಕ್ಷಣ: ಕುಮಾರಸ್ವಾಮಿ - ಬಿಎ, ಜಯನಗರ ನ್ಯಾಷನಲ್ ಕಾಲೇಜ್, ಬೆಂಗಳೂರು 1978-79.
ಪಡೆದಿರುವ ಸಾಲ: ಕುಮಾರಸ್ವಾಮಿ - 2.1 ಕೋಟಿ ರು. ಅನಿತಾ ಕುಮಾರಸ್ವಾಮಿ - 66 ಕೋಟಿ ರುಪಾಯಿ.
* ಚಿನ್ನಾಭರಣ 750 ಗ್ರಾಂ 12.5 ಕೆಜಿ ಬೆಳ್ಳಿ ಸಾಮಗ್ರಿ ಮತ್ತು 4 ಕ್ಯಾರೆಟ್ ವಜ್ರಾಭರಣ: ಒಟ್ಟು ಮೊತ್ತ 25 ಲಕ್ಷ ರುಪಾಯಿ