ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್ ಆರೋಪಗಳಿಗೆ ಗುಜರಾತ್ ಪ್ರತ್ಯುತ್ತರ

ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ...

Vishwanath S
Updated On : 26 Mar 2014, 3:50 am

ಗಾಂಧೀನಗರ: ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ನಾನಾ ಆರೋಪಗಳನ್ನು ಮಾಡಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಗುಜರಾತ್ ಸರ್ಕಾರ ಬುಧವಾರ ಪ್ರತ್ಯುತ್ತರ ನೀಡಿದೆ.

ಇದೇ ಮೊದಲ ಬಾರಿಗೆ ಕೇಜ್ರಿವಾಲ್‌ರ ಆರೋಪಗಳಿಗೆ ಎಳೆ ಎಳೆಯಾಗಿ ಉತ್ತರಿಸಿರುವ ಗುಜರಾತ್ ಸರ್ಕಾರ ಅರವಿಂದ್ ಕೇಜ್ರಿವಾಲ್‌ರ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದು, ಗುಜರಾತ್‌ನಲ್ಲಿ ಆಗಿರುವ ಅಭಿವೃದ್ಧಿಗೂ ಕೇಜ್ರಿವಾಲ್‌ರ ಆರೋಪಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕೇಜ್ರಿವಾಲ್ ಆರೋಪಗಳು:

1. ಖಾಸಗಿ ಸಂಸ್ಥೆಗಳಿಗೆ ನೀಡಿರುವ ಭೂಮಿಯನ್ನು ಗುಜರಾತ್ ಸರ್ಕಾರ ರೈತರಿಂದ ಬಲವಂತವಾಗಿ ಕಿತ್ತುಗೊಂಡಿದೆ?
ಎಎಪಿ ಸರ್ಕಾರದ ಈ ಆರೋಪಗಳು ಕೇವಲ 'ಸುಳ್ಳು ಪ್ರಚಾರ'ದ ಗಿಮಿಕ್ ಎಂದಿರುವ ಗುಜರಾತ್ ಸರ್ಕಾರ, ಈ ಆರೋಪದಲ್ಲಿ ಯಾವುದೇ ತಿರುಳಿಲ್ಲ. ಗುಜರಾತ್ ಸರ್ಕಾರದ ಭೂ ಸ್ವಾಧೀನ ನೀತಿಯನ್ನು ಸುಪ್ರೀಂಕೋರ್ಟ್ ಸಹ ಪ್ರಶಂಸಿಸಿದೆ. ನಾವು ಪ್ರತಿಯೊಬ್ಬ ರೈತರಿಂದ ಬಲವಂತವಾಗಿ ಭೂಮಿಯನ್ನು ಕಿತ್ತುಕೊಂಡಿಲ್ಲ. ಭೂ ಸ್ವಾಧೀನ ನೀತಿಯಡಿ ಪ್ರಸ್ತುತ ಮಾರುಕಟ್ಟೆ ದರ ಆಧರಿಸಿ ರೈತರಿಗೆ ಹಣ ನೀಡಲಾಗಿದೆ ಎಂದು ತಿಳಿಸಿದೆ.

2. ಕಳೆದ 10 ವರ್ಷದ ಅವಧಿಯಲ್ಲಿ ಗುಜರಾತ್‌ನಲ್ಲಿ ಬೆಳೆ ನಾಶದಿಂದಾಗಿ ಸುಮಾರು 5,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ?
ಇದು ಸತ್ಯಕ್ಕೆ ದೂರವಾಗಿದೆ ಎಂದಿರುವ ಗುಜರಾತ್ ಸರ್ಕಾರ, ಕೇಜ್ರಿವಾಲ್ ಗುಜರಾತ್‌ಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಸುಮಾರು 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಆದರೆ ಇದೀಗ ವಾರಣಾಸಿಯಲ್ಲಿ 5,000 ಎಂದು ಆರೋಪಿಸಿದ್ದಾರೆ ಇದು ಎಷ್ಟು ಸರಿ? ಕಳೆದ 10 ವರ್ಷದಲ್ಲಿ ಬೆಳೆ ನಾಶದಿಂದಾಗಿ ಕೇವಲ ಒಬ್ಬ ರೈತ ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

3. ಗುಜರಾತ್‌ನಲ್ಲಿ ಸುಮಾರು 60,000 ಸಣ್ಣ ಪ್ರಮಾಣದ ಘಟಕಗಳು ಮುಚ್ಚಿವೆ?
ಈ ಆರೋಪವನ್ನು ತಳ್ಳಿ ಹಾಕಿರುವ ಸರ್ಕಾರ, ಗುಜರಾತ್‌ನಲ್ಲಿ ಸುಮಾರು 5.1 ಲಕ್ಷ ಸಣ್ಣ ಮತ್ತು ಮಧ್ಯಮ ಪ್ರಮಾಣದ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement