ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೊನೆಯ ದಿನ ನಾಮಪತ್ರ ಸಲ್ಲಿಸಿದ ಪ್ರಮುಖ ನಾಯಕರು

ರಾಜ್ಯದಲ್ಲಿ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ...

Vishwanath S
Updated On : 26 Mar 2014, 4:43 am

ಬೆಂಗಳೂರು: ರಾಜ್ಯದಲ್ಲಿ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದು, ಈಗಾಗಲೇ 444 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಎಲ್ಲಾ ಪಕ್ಷದ ಹುರಿಯಾಳುಗಳು ನಾಮಪತ್ರ ಸಲ್ಲಿಸಲ್ಲಿದ್ದಾರೆ.

ರಾಮನಗರ ಶಾಸಕ ಎಚ್ ಡಿ ಕುಮಾರಸ್ವಾಮಿ ಅವರು ಇದೀಗ ತಾನೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು.

ಮಂಡ್ಯ ಕ್ಷೇತ್ರದಿಂದ ನಟಿ ರಮ್ಯಾ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಅಪಾರ ಕಾಂಗ್ರೆಸ್ ಬೆಂಬಲಿಗರು ರಮ್ಯಾಗೆ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಯ ವೇಳೆ ರಮ್ಯಾ ಅವರು ತಮ್ಮ ದಿವಂಗತ ತಂದೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.

ಇಂದು ನಾಮಪತ್ರ ಸಲ್ಲಿಸಿದ ಪ್ರಮುಖರು:
1)ಎಚ್​.ಡಿ.ಕುಮಾರಸ್ವಾಮಿ: ಚಿಕ್ಕಬಳ್ಳಾಪುರ
2) ರಮ್ಯಾ: ಮಂಡ್ಯ
3) ಶೋಭಾ ಕರಂದ್ಲಾಜೆ: ಉಡುಪಿ
4) ನ್ಯಾ. ಚಂದ್ರಶೇಖರಯ್ಯ: ಮೈಸೂರು
5) ಜನಾರ್ದನಪೂಜಾರಿ: ಮಂಗಳೂರು
6) ಶ್ರೀರಾಮುಲು: ಬಳ್ಳಾರಿ
7) ಪ್ರಮೋದ್ ಮುತಾಲಿಕ್: ಧಾರವಾಡ
8) ಜಯಪ್ರಕಾಶ್​ ಹೆಗ್ಡೆ: ಉಡುಪಿ

ಇಂದು ನಾಮಪತ್ರ ಸಲ್ಲಿಸುವ ಪ್ರಮುಖರು:
ಬಿ.ಎನ್​.ಬಚ್ಚೇಗೌಡ: ಚಿಕ್ಕಬಳ್ಳಾಪುರ

ಪ್ರಶಾಂತ್ ದೇಶಪಾಂಡೆ: ಉತ್ತರ ಕನ್ನಡ
ಭಗವಂತ ಖೂಬಾ: ಬೀದರ

ಇಂದು ಚಿಕ್ಕಬಳ್ಳಾಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್​.ಬಚ್ಚೇಗೌಡ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಉತ್ತರ ಕನ್ನಡದಿಂದ ಪ್ರಶಾಂತ್ ದೇಶಪಾಂಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಭಗವಂತ್ ಖೂಬಾ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸೂರ್ಯಕಾಂತ್ ನಾಗಮಾರಪಲ್ಲಿ ಬಿಜೆಪಿ ವರಿಷ್ಠರ ಸಲಹೆಯಂತೆ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಕೆಲವರು ಬಿ-ಫಾರಂ ವಂಚಿತರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಇನ್ನು ಕೆಲವರು ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಚುನಾವಣಾ ರಂಗು ಜೋರಾಗಿರುತ್ತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement