ಸದ್ದಿಲ್ಲದೆ ಸುದ್ದಿ: ಸಿಎನ್ಎನ್ ವರದಿಗಾರರ ಬಂಧನ
ಗೌಪ್ಯವಾಗಿ ನ್ಯೂಯಾರ್ಕ್ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂಟಿಸಿ)ದಲ್ಲಿನ ಭದ್ರತೆಯ ಲೋಪ ಕುರಿತು ವರದಿ ಮಾಡಲು..
ನ್ಯೂಯಾರ್ಕ್: ಗೌಪ್ಯವಾಗಿ ನ್ಯೂಯಾರ್ಕ್ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂಟಿಸಿ)ದಲ್ಲಿನ ಭದ್ರತೆಯ ಲೋಪ ಕುರಿತು ವರದಿ ಮಾಡಲು ಯತ್ನಿಸಿದ ಸಿಎನ್ಎನ್ನ ಇಬ್ಬರು ಪತ್ರಕರ್ತರನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಇನ್ನು ನಿರ್ಮಾಣ ಹಂತದಲ್ಲಿರುವ ಪ್ರಮುಖ ದ್ವಾರದ ಮೂಲಕ ಸದ್ದಿಲ್ಲದೆ ವಿಶ್ವ ವಾಣಿಜ್ಯ ಕೇಂದ್ರವನ್ನು ಪ್ರವೇಶಿಸಲು ಯತ್ನಿಸಿದ 35 ವರ್ಷದ ಯೊನ್ ಪೊರ್ಮೆಂಜ್ ಮತ್ತು 26 ವರ್ಷದ ಕೊನ್ನೊರ್ ಫೀಲ್ಡ್ಮನ್ ಬೋಲ್ಸ್ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಬಳಿ ಇದ್ದ ವಿಡಿಯೋ ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಇಬ್ಬರು ಪತ್ರಕರ್ತರನ್ನು ಸಿಎನ್ಎನ್ ವರದಿಗಾರರೆಂದು ಗುರುತಿಸಲಾಗಿದೆ. ವಿಶ್ವ ವಾಣಿಜ್ಯ ಕೇಂದ್ರದ ಭದ್ರತಾ ವ್ಯವಸ್ಥೆಯ ಬಗ್ಗೆ ವರದಿ ಮಾಡಲು ತೆರಳಿದ್ದರು ಎಂದು ಸುದ್ದಿ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
2011, ಸೆಪ್ಟೆಂಬರ್ 11ರ ದಾಳಿಯ ನಂತರ ವಿಶ್ವ ವಾಣಿಜ್ಯ ಕೇಂದ್ರ ಅವಳಿ ಕಟ್ಟಡಗಳನ್ನು ಪೂನರ್ ನಿರ್ಮಿಸಲಾಗುತ್ತಿದ್ದು, ಈ ವರ್ಷದ ಅಂತ್ಯಕ್ಕೆ ವಿಶ್ವ ವಾಣಿಜ್ಯ ಕೇಂದ್ರ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಇದರ ಭದ್ರತೆಗಾಗಿ ಅಮೆರಿಕ ಸರ್ಕಾರ ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಿದೆ.