ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

10 ಸಾವಿರ ಕೋಟಿ ಭದ್ರತೆ ಒದಗಿಸದ ಸಹಾರಾ, ಸುಬ್ರತಾ ರಾಯ್ಗೆ ಜೈಲೇ ಗತಿ

ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಜಾಮೀನಿಗಾಗಿ 10 ಸಾವಿರ ಕೋಟಿ ರುಪಾಯಿ ಭದ್ರತೆ ಒದಗಿಸಲು ಸಹಾರಾ ಸಂಸ್ಥೆ ನಿರಾಕರಿಸಿದ್ದು,

Lingaraj Badiger
Updated On : 27 Mar 2014, 4:52 am

ನವದೆಹಲಿ: ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಜಾಮೀನಿಗಾಗಿ 10 ಸಾವಿರ ಕೋಟಿ ರುಪಾಯಿ ಭದ್ರತೆ ಒದಗಿಸಲು ಸಹಾರಾ ಸಂಸ್ಥೆ ನಿರಾಕರಿಸಿದ್ದು, ಸುಬ್ರತಾ ರಾಯ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 3ಕ್ಕೆ ಮುಂದೂಡಿದೆ.

ಸುಬ್ರತಾ ರಾಯ್ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಮತ್ತು ಅವರನ್ನು ಸಂವಿಧಾನ ಬಾಹಿರವಾಗಿ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ ಎಂದು ರಾಯ್ ಪರ ವಕೀಲರು ವಾದಿಸಿದ್ದಾರೆ. ಅಲ್ಲದೆ ರಾಯ್ ಜಾಮೀನಿಗಾಗಿ ಸಹರಾ ಸಂಸ್ಥೆ 10 ಸಾವಿರ ಕೋಟಿ ರುಪಾಯಿ ಕೊಡುವ ಪರಿಸ್ಥಿತಿಯಲ್ಲಿಲ್ಲ ಮತ್ತು ಒಬ್ಬ ವ್ಯಕ್ತಿಯ ಜಾಮೀನಿಗಾಗಿ 10 ಸಾವಿರ ಕೋಟಿ ರುಪಾಯಿ ಕೇಳುವುದು ಅಪ್ರಸ್ತುತ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಸಹಾರಾ ಸಂಸ್ಥೆ ಈಗಾಗಲೇ ದಿನಪತ್ರಿಕೆಯಲ್ಲಿ ಜಾಹಿರಾತು ನೀಡುವ ಮೂಲಕ ಸುಪ್ರೀಂ ಕೋರ್ಟ್ ಕ್ಷಮೆ ಕೋರಿದೆ ಎಂದು ಜಾಮೀನು ಅರ್ಜಿಯ ವಿಚಾರಣೆ ವೇಳೆ ರಾಯ್ ಪರ ವಕೀಲರು ವಾದಿಸಿದರು.

ನಿನ್ನೆಯಷ್ಟೆ ಸುಬ್ರತಾ ರಾಯ್ ಹಾಗೂ ಸಹಾರಾ ಸಂಸ್ಥೆಯ ಇಬ್ಬರು ನಿರ್ದೇಶಕರಿಗೆ ಮಧ್ಯಂತರ ಜಾಮೀನು ನೀಡಬೇಕಾದರೆ 10 ಸಾವಿರ ಕೋಟಿ ರುಪಾಯಿ ಬ್ಯಾಂಕ್ ಠೇವಣಿ ನೀಡುವಂತೆ ಸಹಾರಾ ಸಂಸ್ಥೆಗೆ ಸೂಚಿಸಿತ್ತು. ಆದರೆ ಸಹಾರಾ ಸಂಸ್ಥೆ ಠೇವಣಿ ಇಡಲು ನಿರಾಕರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement