ಕುಂ.ವೀ ಗೆ 'ಗಡಿನಾಡ ಸಾಹಿತ್ಯ ಪ್ರಶಸ್ತಿ'
ಕರ್ನಾಟಕ ಸರ್ಕಾರವು ಗಡಿ ಭಾಗದಲ್ಲಿ ಸಾಹಿತ್ಯ/ಸಂಶೋಧನೆ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಹಾಗೂ ಅನನ್ಯ ಕೊಡುಗೆಯನ್ನು ನೀಡುತ್ತ ಬಂದಿರುವ ಗಣ್ಯರನ್ನು ಆಯ್ಕೆ ಮಾಡಿ ಕೊಡಲಾಗುತ್ತಿರುವ ೨೦೧೨ ನೇ ಸಾಲಿನ "ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ"ಗೆ ಕುಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಮೂರು ಲಕ್ಷ ರೂಪಾಯಿಗಳ ನಗದು, ಪ್ರಶಸ್ತಿ ಪುತ್ಥಳಿ, ಫಲಕವನ್ನು ಒಳಗೊಂಡಿರುತ್ತದೆ.