ಗಯಾ: ಮೋದಿ ಸಮಾವೇಶಕ್ಕೂ ಮುನ್ನ 2 ಮೊಬೈಲ್ ಟವರ್ ಸ್ಫೋಟ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಟಾರ್ಗೆಟ್ ಮಾಡಿ...
ಗಯಾ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಟಾರ್ಗೆಟ್ ಮಾಡಿದ್ದ ಮಾವೋವಾದಿಗಳು ಬಿಹಾರದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶಕ್ಕೂ ಮುನ್ನ ಎರಡು ಮೊಬೈಲ್ ಟವರ್ಗಳನ್ನು ಸ್ಫೋಟಿಸಿದ್ದಾರೆ.
ಇಂದು ಮಧ್ಯಾಹ್ನ ಬಿಹಾರದ ಗಯಾ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕೂ ಮುನ್ನು ಮಾವೋವಾದಿಗಳು ದುಮಾರೀಯ-ಇಮಾಮ್ಗಂಜ್ ಎಂಬಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಎರಡು ಮೊಬೈಲ್ ಟವರ್ಗಳನ್ನು ಸ್ಫೋಟಿಸಿ ಭಯದ ವಾತಾವರಣ ಸೃಷ್ಠಿ ಮಾಡಿದ್ದಾರೆ.
ಸಮಾವೇಶ ನಡೆಯಲಿರುವ ಸ್ಥಳದ ಸಮೀಪದ ದುಮಾರೀಯ ಬ್ಲಾಕ್ ಪ್ರಧಾನ ಕಚೇರಿ ಬಳಿ ಹಾಗೂ ಮಂಜೋಳಿಯ ಹಳ್ಳಿಯ ಕೋಠಿ ಪೊಲೀಸ್ ಠಾಣೆಯ ಸಮೀಪದಲ್ಲೇ ಮೊಬೈಲ್ ಟವರನ್ನು ಮಾವೋವಾದಿಗಳು ಸ್ಫೋಟಿಸಿದ್ದಾರೆ. ಅಲ್ಲದೆ ನಾಗರಿಕರು ಮುಂದಿನ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಮಾವೋವಾದಿಗಳು ಸೂಚನಾ ಫಲಕಗಳನ್ನು ಹಾಕಿದ್ದು, ಜನರಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ.
ಮಾವೋವಾದಿಗಳು ಎರಡು ಮೊಬೈಲ್ ಟವರ್ಗಳನ್ನು ಸ್ಫೋಟಿಸಿದ್ದಾರೆ. ಸದ್ಯ ಸ್ಫೋಟದಿಂದ ಯಾರಿಗೂ ಅಪಾಯವಾಗಿಲ್ಲ. ಜನರು ಮನೆಗಳಿಂದ ಹೊರಬರದಂತೆ ಬೆದರಿಕೆಯೊಡ್ಡಲು ಈ ದಾಳಿ ನಡೆಸಿದ್ದಾರೆ ಎಂದು ಸಿಆರ್ಪಿಎಫ್ ಡಿಐಜಿ ಚಿರಂಜೀವ್ ಕುಮಾರ್ ತಿಳಿಸಿದ್ದಾರೆ. ಸದ್ಯ ಬಾಂಬ್ ನಿಷ್ಕ್ರೀಯ ದಳ ಸ್ಧಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಛಾತ್ರಾದಲ್ಲಿ ನಡೆದ ದಾಳಿಗೆ 10 ಮಾವೋವಾದಿಗಳು ಹತರಾದ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ ಭಾಗದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಗುರುವಾರ ಬಂದ್ಗೆ ಕರೆ ನೀಡಲಾಗಿದೆ.