ಎಎಪಿಗೆ ಬೆಂಬಲಿಸುತ್ತಿಲ್ಲ: ಚು.ಆಯೋಗಕ್ಕೆ ಅಮಿರ್‌ಖಾನ್ ಪತ್ರ
ಆಮ್ ಆದ್ಮಿ ಪಕ್ಷ ಸೇರಿದಂತೆ ಇತರೆ ಯಾವುದೇ ಪಕ್ಷಕ್ಕೆ ನಾನು...
ಮುಂಬೈ: ಆಮ್ ಆದ್ಮಿ ಪಕ್ಷ ಸೇರಿದಂತೆ ಇತರೆ ಯಾವುದೇ ಪಕ್ಷಕ್ಕೆ ನಾನು ಬೆಂಬಲಿಸುತ್ತಿಲ್ಲ ಎಂದು ಬಾಲಿವುಡ್ ನಟ ಅಮಿರ್ ಖಾನ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಶಿಬಿರದ ಹೆಸರಲ್ಲಿ ಅಮಿರ್‌ಖಾನ್ ಅವರು ಎಎಪಿಗೆ ಬೆಂಬಲಿಸುತ್ತಿದ್ದಾರೆ ಎಂಬ ಹೇಳಿಕೆಗಳು ಕೇಳಿ ಬಂದಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಅಮಿರ್ ಖಾನ್ ನಾನು ಯಾವುದೇ ಪಕ್ಷಕ್ಕೆ ಬೆಂಬಲಿಸುತ್ತಿಲ್ಲ ಹಾಗೂ ಪ್ರಚಾರ ಮಾಡುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಅಮಿರ್ ಖಾನ್ ಅವರು ಕೇವಲ ಸಾಮಾಜಿಕ ಜವಬ್ದಾರಿಯನ್ನು ಜನತೆಗೆ ತಿಳಿಸುತ್ತಿದ್ದಾರೆ. ಜನತೆಗೆ ತಮ್ಮ ಹಕ್ಕಿನ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ ಹೊರತು, ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಅಮಿರ್ ಖಾನ್ ಅವರ ವಕ್ತಾರ ತಿಳಿಸಿದ್ದಾರೆ.