ದೆಹಲಿ ಗ್ಯಾಂಗ್ ರೇಪ್ ಪ್ರಕರಣ: ಬಾಲಪರಾಧಿ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ್ದ ಯುವತಿಯ ಪೋಷಕರು ಬಾಲಾಪರಾಧಿ ವಿಚಾರಣೆಯನ್ನು ಕ್ರಿಮಿನಲ್ ಕೋರ್ಟ್‌ನಲ್ಲಿ ನಡೆಸುವಂತೆ ಬಾಲಪಾರಾಧ...
ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ್ದ ಯುವತಿಯ ಪೋಷಕರು ಬಾಲಾಪರಾಧಿ ವಿಚಾರಣೆಯನ್ನು ಕ್ರಿಮಿನಲ್ ಕೋರ್ಟ್‌ನಲ್ಲಿ ನಡೆಸುವಂತೆ ಬಾಲಪಾರಾಧ ಮಂಡಳಿಗೆ ಸೂಚಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅತ್ಯಾಚಾರವೆಸಗಿದ್ದ ಬಾಲಾಪರಾಧಿಗೆ ಈಗ 18 ವರ್ಷ ತುಂಬಿದೆ. ಆತ ಅತ್ಯಾಚಾರವೆಸಗಿದ್ದಾಗ ಆತನಿಗೆ 17 ವರ್ಷ ಆರು ತಿಂಗಳು ವಯಸ್ಸಾಗಿತ್ತು. ಆತನಿಗೆ 18 ವರ್ಷ ತುಂಬಲು ಕೇವಲ 6 ತಿಂಗಳು ಉಳಿದಿದ್ದರಿಂದ ಆತನನ್ನು ವಯಸ್ಕನೆಂದು ಪರಿಗಣಿಸಿ ಕ್ರಿಮಿನಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವಂತೆ ಆದೇಶಿಸಿ ಎಂದು ಯುವತಿಯ ಪೋಷಕರು ಮನವಿ ಮಾಡಿದ್ದರು.
ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಅತ್ಯಾಚಾರವೆಸಗಿದ್ದ ಆರು ಅಪರಾಧಿಗಳಲ್ಲಿ ಓರ್ವ ಬಾಲಾಪರಾಧಿಯಾಗಿದ್ದನು.