ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಾಯುಸೇನೆಗೆ ಸೇರಿದ ಹರ್ಕ್ಯುಲಿಸ್ ವಿಮಾನ ಪತನ, 5 ಸಾವು

ಭಾರತೀಯ ವಾಯುಸೇನೆಗೆ ಸೇರಿದ ಸೂಪರ್ ಹರ್ಕ್ಯುಲಿಸ್ ವಿಮಾನ ಶುಕ್ರವಾರ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪತನವಾಗಿದೆ.

Lingaraj Badiger
Updated On : 28 Mar 2014, 1:27 am

ಗ್ವಾಲಿಯರ್: ಭಾರತೀಯ ವಾಯುಸೇನೆಗೆ ಸೇರಿದ ಸೂಪರ್ ಹರ್ಕ್ಯುಲಿಸ್ ವಿಮಾನ ಶುಕ್ರವಾರ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ ಐವರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಉತ್ತರ ಪ್ರದೇಶದ ಆಗ್ರಾದಿಂದ ಹೊರಟಿದ್ದ ಸೂಪರ್ ಹರ್ಕ್ಯುಲಿಸ್ ಸಿ-130ಜೆ ವಿಮಾನ ಮಧ್ಯಾಹ್ನ 72 ಕಿ.ಮೀ.ದೂರದಲ್ಲಿರುವ ಮಧ್ಯಪ್ರದೇಶ-ರಾಜಸ್ಥಾನ ಗಡಿಯಲ್ಲಿ ಪತನವಾಗಿದೆ.

ವಿಶೇಷ ಕಾರ್ಯಚರಣೆಗಾಗಿ ಬಳಸಲಾಗುತ್ತಿದ್ದ ಈ ವಿಮಾನವನ್ನು ಇತ್ತೀಚಿಗೆ ಮಲೇಷ್ಯಾ ವಿಮಾನ ಪತ್ತೆ ಕಾರ್ಯಚರಣೆಗೂ ಬಳಸಿಕೊಳ್ಳಲಾಗಿತ್ತು. ಅಲ್ಲದೆ ಉತ್ತರಾಖಂಡ್ ಪ್ರವಾಹ ಪರಿಹಾರದ ವೇಳೆಯೂ ಬಳಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement