ಉದಯೋನ್ಮುಖ ನಟ ಅಂದಾನ್ ಸಾವು
ಆಂಧ್ರಪ್ರದೇಶ: 'ಲವ್ ಜಂಕ್ಷನ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತನಾಗಬೇಕಿದ್ದ ಉದಯೋನ್ಮುಖ ನಾಯಕ ನಟ ಅಂದಾನ್ ಕುಮಾರ್ ಶನಿವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತನ್ನ 8 ಸ್ನೇಹಿತರೊಂದಿಗೆ ಕಾರಿನಲ್ಲಿ ಶ್ರೀ ಶೈಲ ದೇವರ ದರ್ಶನಕ್ಕೆ ಅಂದಾನ್ ತೆರಳಿದ್ದರು. ಈ ವೇಳೆ ಆಂಧ್ರದ ಪ್ರಕಾಶಂ ಜಿಲ್ಲೆಯ ಡೋರನಾಳ ಬಳಿ ಆಂಧ್ರ ಬಸ್ ಹಾಗೂ ಕಾರು ಮುಖಾಮುಖಿ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಅಂದಾನ್ ಸ್ಥಳದಲ್ಲೆ ಮೃತಪಟ್ಟಿದ್ದು, ಉಳಿದ 7 ಮಂದಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ಮೂಲದವರಾದ ಅಂದಾನ್ ಕುಮಾರ್ ಲವ್ ಜಂಕ್ಷನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದರು. ಆದರೆ ಚಿತ್ರ ರಿಲೀಸ್‌ಗೂ ಮುನ್ನ ಇಹಲೋಕ ತ್ಯಜಿಸಿದರು.