'ಎಕೆ' ಬಗ್ಗೆ ಮೋದಿ ಟೀಕೆ: ಆಂಟೋನಿ ಕಿಡಿ
ರಕ್ಷಣಾ ಸಚಿವ ಎ.ಕೆ ಆಂಟೋನಿ ಪಾಕಿಸ್ತಾನದ ಏಜೆಂಟ್ ಎಂಬ ಗುಜರಾತ್ ...
ನವದೆಹಲಿ: ರಕ್ಷಣಾ ಸಚಿವ ಎ.ಕೆ ಆಂಟೋನಿ ಪಾಕಿಸ್ತಾನದ ಏಜೆಂಟ್ ಎಂಬ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿಕೆಯನ್ನು ಆಂಟೋನಿ ಶನಿವಾರ ಖಂಡಿಸಿದ್ದಾರೆ.
ಮೋದಿ ನನ್ನನ್ನು ಪಾಕಿಸ್ತಾನದ ಏಜೆಂಟ್ ಎನ್ನುವ ಮೂಲಕ ಇಡೀ ಭಾರತೀಯ ಸೇನಾಪಡೆಯನ್ನು ಅವಮಾನಿಸಿದ್ದಾರೆ ಎಂದು ಆಂಟೋನಿ ಕಿಡಿಕಾರಿದ್ದಾರೆ.
ಮಾರ್ಚ್ 26ರಂದು ಜಮ್ಮು ಕಾಶ್ಮೀರದ ಹಿರಾ ನಗರ್ ಮತ್ತು ಕತೌ ಎಂಬಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ, ರಕ್ಷಣಾ ಸಚಿವ ಎ.ಕೆ ಆಂಟೋನಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಪಾಕಿಸ್ತಾನದ ಏಜೆಂಟ್ ಎಂದು ಹೇಳಿಕೆ ನೀಡಿದ್ದರು.
ಮೂರು 'ಎಕೆ' ದೇಶಕ್ಕೆ ಅಪಾಯಕಾರಿ, ಮೋದಲನೆಯದು ಎಕೆ-47 ಶಸ್ತ್ರಾಸ್ತ್ರ, ಎರಡನೆಯದು ಎ.ಕೆ ಆಂಟೋನಿ ಹಾಗೂ ಮೂರನೆಯದು ಎಕೆ-49 ಅಂದರೆ ದೆಹಲಿಯಲ್ಲಿ 49 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅರವಿಂದ್ ಕೇಜ್ರಿವಾಲ್ ಎಂದು ಮೋದಿ ಆಪಾದಿಸಿದ್ದರು.
ಮೋದಿ ಹೇಳಿಕೆ ಬಗ್ಗೆ ಕಿಡಿಕಾರಿರುವ ಆಂಟೋನಿ, ಎಕೆಯನ್ನು ಪಾಕಿಸ್ತಾನದ ಏಜೆಂಟ್ಗೆ ಹೋಲಿಸುವ ಭಾರತೀಯ ಸೇನಾಪಡೆಗೆ ಅವಮಾನವೆಸಗಿದ್ದಾರೆ. ಮೋದಿ ಅವರ ಈ ಹೇಳಿಕೆ ಪ್ರಧಾನಿ ಅಭ್ಯರ್ಥಿಗೆ ಸೂಕ್ತವೆನಿಸುತ್ತಿಲ್ಲ ಎಂದು ಹೇಳಿದ್ದಾರೆ.