ರಾಖಿಯಿಂದ ರಾಜಕೀಯ ಪಕ್ಷ ಸ್ಥಾಪನೆ
ಮುಂಬೈ: ಬಾಲಿವುಡ್ ಐಟಂ ಕ್ವೀನ್ ರಾಖಿ ಸಾವಂತ್ ಅವರು ರಾಷ್ಟ್ರೀಯ ಆಮ್ ಪಕ್ಷವನ್ನು ಕಟ್ಟಿದ್ದಾರೆ.
ರಾಖಿ ನೂತನವಾಗಿ ರಾಷ್ಟ್ರೀಯ ಆಮ್ ಪಕ್ಷ(ಆರ್‌ಎಎಪಿ) ಸ್ಥಾಪಿಸಿದ್ದು, ಪಕ್ಷದ ಅಭ್ಯರ್ಥಿಯಾಗಿ ಮುಂಬೈನ ಈಶಾನ್ಯ ಭಾಗದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಆಮ್ ಪಕ್ಷದ ಚಿಹ್ನೆ 'ಹಸಿಮೆಣಸಿನಕಾಯಿ'. ನಾನು ಯಾವುದೇ ರಾಜಕೀಯ ವ್ಯಕ್ತಿಯ ಕೈಕೆಳಗೆ ಕೆಲಸ ಮಾಡುವ ಅಗತ್ಯತೆ ಇಲ್ಲ. ಇಲ್ಲಿ ನನಗೆ ನನ್ನದೆ ಆದ ಆಯ್ಕೆ ಇದೆ. ನೊಂದಿರುವ ಜನತೆ ದುಃಖವನ್ನು ಅಳಿಸುವುದೇ ನನ್ನ ಗುರಿ ಎಂದು ರಾಖಿ ಹೇಳಿದ್ದಾರೆ.
ಇತ್ತೀಚೆಗೆಷ್ಟೇ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದರು. ಪ್ರಮುಖ ಪಕ್ಷವೊಂದು ನನಗೆ ಟಿಕೆಟ್ ನೀಡುತ್ತಿದೆ ಎಂದಿದ್ದರು. ತದ ನಂತರ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದು ಶೀಘ್ರದಲ್ಲೇ ತಿಳಿಸುತ್ತೇನೆ ಎಂದಿದ್ದರು.
ಆದರೆ ಈಗ ರಾಖಿ ಸಾವಂತ್ ಪ್ರತ್ಯೇಕವಾಗಿ ಪಕ್ಷ ಸ್ಥಾಪಿಸಿದ್ದು, ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ಇನ್ನೂ ಲೋಕ ಸಮರಕ್ಕೆ ಸಜ್ಜಾಗಿರುವ ರಾಖಿಗೆ ಮುಂಬೈ ಈಶಾನ್ಯ ಭಾಗದ ಜನರು ಜೈ ಎನ್ನುತ್ತಾರಾ ಕಾದು ನೋಡಬೇಕಿದೆ.