ಬಿಜೆಪಿಯಿಂದ ಜಸ್ವಂತ್ ಉಚ್ಚಾಟನೆ
ಬಿಜೆಪಿಯಿಂದ 2ನೇ ಬಾರಿಗೆ ಉಚ್ಚಾಟನೆಗೊಂಡ ಹಿರಿಯ ನಾಯಕ ಜಸ್ವಂತ್ ಸಿಂಗ್
ನವದೆಹಲಿ: ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರನ್ನು ಬಿಜೆಪಿ 6 ವರ್ಷ ಕಾಲ ಉಚ್ಚಾಟಿಸಿದೆ.
ರಾಜಸ್ಥಾನದ ಬಾರ್ಮರ್ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋನಾರಾಂ ಚೌದರಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಸ್ವಂತ್, ಬಿಜೆಪಿಯಿಂದ ಉಚ್ಚಾಟನೆಗೆ ಗುರಿಯಾಗಿದ್ದಾರೆ.
ಬಿಜೆಪಿಯಿಂದ ಜಸ್ವಂತ್ ಸಿಂಗ್ ಉಚ್ಚಾಟನೆ ಗುರಿಯಾಗಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ 2009ರಲ್ಲಿ ಜಸ್ವಂತ್ ಪಾಕ್ ಸಂಸ್ಥಾಪಕ ಮಹಮದಾಲಿ ಜಿನ್ನಾ ಅವರನ್ನು ಹೊಗಲಿ ಮೊದಲ ಬಾರಿ ಉಚ್ಚಾಟಿತರಾಗಿದ್ದರು.
ಆ ನಂತರ ಪಕ್ಷಕ್ಕೆ ಮರಳಿ ಜಸ್ವಂತ್ ಸಿಂಗ್, ಈ ಬಾರಿ ಬಾರ್ಮರ್ ಕ್ಷೇತ್ರದಲ್ಲಿ ತಮಗೆ ಟಿಕೆಟ್ ನೀಡದೇ, ಕಾಂಗ್ರೆಸ್ನಿಂದ ಬದ ಸೋನಾರಾಂ ಚೌದರಿಗೆ ಟಿಕೆಟ್ ಕೊಟ್ಟ ಕಾರಣ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಗಿ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರವೂ ಉಮೇದುವಾರಿಕೆಯನ್ನು ಹಿಂಪಡೆದಿರಲಿಲ್ಲ. ಹೀಗಾಗಿ ಜಸ್ವಂತ್ರನ್ನು ಉಚ್ಚಾಟಿಸಲಾಗಿದೆ. ಜಸ್ವಂತ್ ಎನ್ಡಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.