'ಆಡಳಿತ ಮಕ್ಕಳಾಟವಲ್ಲ': ಸೋನಿಯಾ ಹೇಳಿಕೆಗೆ ಕೇಜ್ರಿವಾಲ್ ತಿರುಗೇಟು
ಆಡಳಿತ ಮಕ್ಕಳಾಟವಲ್ಲ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೇಳಿಕೆ ಉಪಾಧ್ಯಕ್ಷ...
ನವದೆಹಲಿ: ಆಡಳಿತ ಮಕ್ಕಳಾಟವಲ್ಲ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೇಳಿಕೆ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸರಿಹೊಂದುತ್ತದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಆಡಳಿತ ಮಕ್ಕಳಾಟವಲ್ಲ. ಅದು ತನ್ನದೇ ಆದ ಜವಾಬ್ದಾರಿ ಹೊಂದಿರುತ್ತದೆ ಎಂದು ಕೇಜ್ರಿವಾಲ್ ವಿರುದ್ಧ ಸೋನಿಯಾ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪ್ರತಿಕ್ರಯಿಸಿರುವ ಕೇಜ್ರಿವಾಲ್, ಬಹುಶಃ ಸೋನಿಯಾ ಅವರಿಗೆ ರಾಹುಲ್ ಮಗುವಿನಂತೆ ಕಾಣಬಹುದು, ಆದರೆ ರಾಹುಲ್ಗೆ 43 ವರ್ಷವಾಗಿದೆ. ಹಾಗಾಗಿ ಅವರು ನೀಡಿದ 'ಆಡಳಿತ ಮಕ್ಕಳಾಟವಲ್ಲ' ಹೇಳಿಕೆ ನನಗಲ್ಲ, ರಾಹುಲ್ಗೆ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ದೆಹಲಿಯ ಚಾಂಡಿ ಚೌಕಿ ಎಂಬಲ್ಲಿ ಪ್ರಚಾರ ಕೈಗೊಂಡಿರುವ ಕೇಜ್ರಿವಾಲ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.