ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸಾಲ ನೀತಿಯನ್ನು ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಾವುದೇ..
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸಾಲ ನೀತಿಯನ್ನು ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕಳೆದ ತ್ರೈಮಾಸಿಕ ಸಾಲ ನೀತಿಯಲ್ಲಿ ರೆಪೋ ದರವನ್ನು 25 ಅಂಶಗಳಷ್ಟು ಹೆಚ್ಚಿಸಿದ್ದ ಆರ್‌ಬಿಐ, ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ ರೆಪೋ ದರ ಶೇ.8ರಷ್ಟ್ಟಿದ್ದು, ಅಲ್ಪವಾಧಿ ಹಾಗೂ ನಗದು ಮೀಸಲು ಅನುಪಾತ(ಶೇ.4)ದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆರ್‌ಬಿಐ ಗೌರ್ನರ್ ರಘುರಾವ್ ರಾಜನ್ ಅವರು ತಿಳಿಸಿದ್ದಾರೆ. ಅಲ್ಲದೆ ಹಣದುಬ್ಬರ ದರದ ಇಳಿಕೆ ಇದೇ ರೀತಿ ಮುಂದುವರೆದಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2014 ಮತ್ತು 2015ನೇ ಸಾಲಿನಲ್ಲಿ ಶೇ.5.5ರಷ್ಟು ಆರ್ಥಿಕ ಪ್ರಗತಿ ಹೊಂದುವ ನಿರೀಕ್ಷಿ ಇಟ್ಟುಕೊಳ್ಳಲಾಗಿದೆ ಮತ್ತು 2014ರಲ್ಲಿ ಚಿಲ್ಲರೆ ಹಣದುಬ್ಬರ ಶೇ.6ಕ್ಕಿಂತ ಕಡಿಮೆ ಇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.